August 12, 2026

ದಿವಂಗತ .ಯಲ್. ಯನ್ ಕುಡೂರ್ ರಿಗೆ ರೂಪ್ಸ(RUPSA) ಆಡಳಿತಗಾರ ಪ್ರಶಸ್ತಿ

0
image_editor_output_image-36652511-1729480413395

ಯಶಸ್ಸು ಅನ್ನೋದು ಜಗತ್ತಿಗೆ ನಮ್ಮನ್ನು ಪರಿಚಯಿಸುತ್ತದೆ, ಆದರೆ ಸೋಲು ಅನ್ನೋದು ಜಗತ್ತನ್ನು ನಮಗೆ ಪರಿಚಯಿಸುತ್ತದೆ “. ಹೀಗೆಂದು ನೂರಾರು ಸಮಸ್ಯೆಗಳ ಸುಳಿವನ್ನು ಮೆಟ್ಟಿ ನಿಂತು, ಬದುಕಿದ್ದಾಗ ಎದೆಯೇರಿಸಿ, ತಲೆ ಎತ್ತಿ ನಿಂತ ದೀಮಂತ ವ್ಯಕ್ತಿ ದಿವಂಗತ ಕೂಡೂರು ಲಕ್ಷ್ಮಿ ನಾರಾಯಣಪ್ಪಯ್ಯ, ಸರಳವಾಗಿ ಯಲ್. ಯನ್ ಕುಡೂರ್ ಎಂದೇ ಖ್ಯಾತರು.

ಗ್ರಾಮೀಣ ಪ್ರದೇಶಕ್ಕೊಂಡು ಆಂಗ್ಲ ಮಾಧ್ಯಮ ಶಾಲೆಯ ಕನಸುಕಂಡು 1986ರಲ್ಲಿ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಸ್ತಾಪಕ ಅಧ್ಯಕ್ಷರಾಗಿ 2024ರ ಜೂನ್ ವರೆಗೂ ಅಧ್ಯಕ್ಷರಾಗಿಯೇ ಉಳಿದ ಅವರ ಸುಧೀರ್ಘ ಆಡಳಿತ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗೆ, ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ, ಕರ್ನಾಟಕ ರೂಪ್ಸ(RUPSA) 2024-25 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಆಡಳಿತ (ಆಡಳಿತಗಾರ )ಪ್ರಶಸ್ತಿಯನ್ನು  21.10.2024ರಂದು ಬೆಂಗಳೂರಿನ ಜುಬಿಲಿ ಅಂತಾರಾಷ್ಟ್ರೀಯ ಆಡಿಟೋರಿಯಂ ನಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ರವರು ನೀಡಿದ್ದಾರೆ. ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಅಗಲಿದ ಸಾಧಕರಿಗೆ, ಸಹಕರಿಸಿದ ಆಡಳಿತ ಮಂಡಳಿಯ ಸಾಧನೆಗೆ,ಪ್ರಶಸ್ತಿ ನೀಡಿದ ಸಂಸ್ಥೆಗೆ ಹಾಗೂ ಸಂಸ್ಥೆಯ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!