August 12, 2026

ಕಲ್ಲಡ್ಕ ; ಅ. 26 ರಂದು ಉಸ್ತಾದ್ ಸಿಂಸಾರುಲ್ ಹಖ್ ಹುದವಿ ಅಬುಧಾಬಿ, ಗೋಳ್ತಮಜಲಿಗೆಅ. 24, 25 ಮತ್ತು 26 ರಂದು ಧಾರ್ಮಿಕ ಪ್ರವಚನ

0
image_editor_output_image-132488474-1729419029879

ಬಂಟ್ವಾಳ: ಕಲ್ಲಡ್ಕ ಸಮೀಪದ ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಇದರ ಆಶ್ರಯದಲ್ಲಿ ಮೂರು ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅಕ್ಟೋಬರ್ 24, 25 ಮತ್ತು 26 ರಂದು ಮಸೀದಿ ವಠಾರದ ಮರ್ಹೂಮ್ ಅಬ್ದುಲ್ ಖಾದರ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ.

ಅ.24 ರಂದು ಅಬ್ದುಸ್ಸಮದ್ ಪುಕೊಟೂರು, ಅ.25 ರಂದು ಅಶ್ಫಾಕ್ ಫೈಝಿ ನಂದಾವರ ಹಾಗೂ ಅ. 26 ರಂದು ಉಸ್ತಾದ್ ಸಿಂಸಾರುಲ್ ಹಖ್ ಹುದವಿ ಅಬುಧಾಬಿ ಧಾರ್ಮಿಕ ಪ್ರವಚನಗೈಯಲಿದ್ದು, ಹಲವಾರು ಧಾರ್ಮಿಕ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!