ಟರ್ಫ್ ಕ್ಲಬ್‌ನಲ್ಲಿ ಮೆಂಬರ್‌ಶಿಫ್ಗಾಗಿ 1.30 ಕೋಟಿ ರೂ. ಪಡೆದ ಸಿದ್ದರಾಮಯ್ಯ: ಶೋಭಾ ಕರಂದ್ಲಾಜೆ ಗಂಭೀರ ಆರೋಪ
ಬೆಂಗಳೂರು: ಇಲ್ಲಿನ ಟರ್ಫ್ ಕ್ಲಬ್ ಮೆಂಬರ್‌ಶಿಫ್ ಕೊಡಿಸಲು ಸಿಎಂ ಸಿದ್ದರಾಮಯ್ಯ ಲಂಚ ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟರ್ಫ್ ಕ್ಲಬ್‌ನಲ್ಲಿ ವಿವೇಕಾನಂದ ಎನ್ನುವವರಿಗೆ ಮೆಂಬರ್‌ಶಿಫ್ (ಸ್ಟುವರ್ಟ್) ಕೊಡಿಸೋಕೆ 1.30 ಕೋಟಿ ರೂ. ಹಣ ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.




