February 3, 2026

ಲಕ್ಕಿ ಬಹುಮಾನದ ಮೆಸೆಜ್:
2.19 ಲಕ್ಷ ರೂ. ಕಳೆದುಕೊಂಡ ಕೊಣಾಜೆಯ ವ್ಯಕ್ತಿ

0
image_editor_output_image1376101271-1639543264751.jpg

ಮಂಗಳೂರು: ಬಹುಮಾನದ ಹಣ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ ಒಟ್ಟು 2.19 ಲಕ್ಷ ರೂ. ಗಳನ್ನು ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ಆಫ್ ಬರೋಡಾ ಕೊಣಾಜೆ ಶಾಖೆಯಲ್ಲಿ ಖಾತೆಯನ್ನು ಹೊಂದಿರುವ ವ್ಯಕ್ತಿಯೋರ್ವರಿಗೆ ಜು.2ರಂದು ಬೆಳಗ್ಗೆ 10ಕ್ಕೆ 9432961373 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ‘ನಿಮಗೆ 12.50 ಲ.ರೂ. ಲಕ್ಕಿ ಬಹುಮಾನ ಬಂದಿದೆ. ಅದನ್ನು ಪಡೆಯಬೇಕಾದರೆ ಶೇ.1 ಹಣ ನೀಡಬೇಕು’ ಎಂದು ತಿಳಿಸಿದ.

ಅದನ್ನು ನಂಬಿದ ದೂರುದಾರ ವ್ಯಕ್ತಿ ತನ್ನ ಖಾತೆಯಿಂದ 12,500 ರೂ. ವನ್ನು ಗೂಗಲ್‌ಪೇ ಸಂಖ್ಯೆ 8017976436ಕ್ಕೆ ಕಳುಹಿಸಿದ್ದಾರೆ. ಜು.16ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಶೇ.3 ಹಣ ನೀಡಿದರೆ ಬಹುಮಾನ ನೀಡುವುದಾಗಿ ಹೇಳಿದ. ಅದರಂತೆ ದೂರುದಾರ ವ್ಯಕ್ತಿ ಮತ್ತೊಮ್ಮೆ ಗೂಗಲ್ ಪೇ ಸಂಖ್ಯೆ 9477219953ಕ್ಕೆ 37,500 ರೂ. ಕಳುಹಿಸಿದ್ದಾರೆ.

ಆ ಬಳಿಕ ಮತ್ತಷ್ಟು ಅಪರಿಚಿತ ವ್ಯಕ್ತಿಗಳು ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ದೂರುದಾರ ವ್ಯಕ್ತಿಯ ಖಾತೆಯಿಂದ ಹಂತ ಹಂತವಾಗಿ 2,19,800 ರೂ.ಗಳನ್ನು ತಮ್ಮಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!