SKSSF ವಿಟ್ಲ ಯೂನಿಟ್: ಕರ್ನಾಟಕ ರಾಜ್ಯದ ಸರ್ಗಲಯ ಕಲೋತ್ಸವ 2024
ವಿಟ್ಲ, ಅಕ್ಟೋಬರ್ 13, 2024: SKSSF ಕರ್ನಾಟಕ ರಾಜ್ಯದ ಮಾರ್ಗದರ್ಶನದಲ್ಲಿ ಆಯೋಜಿಸಲಾದ ಸರ್ಗಲಯ ಕಲೋತ್ಸವ 2024 ವಿಟ್ಲ ಯೂನಿಟ್‌ನಲ್ಲಿ ಅಕ್ಟೋಬರ್ 13, 2024, ಆದಿತ್ಯವಾರ ಮದ್ಯಾಹ್ನ 2:30 ರಿಂದ ಸ್ನೇಹತೀರ ನೀರಕ್ಕಣಿ ಮಸೀದಿ ವಠಾರದಲ್ಲಿ ನೆರವೇರಿತು.
ಈ ಇಸ್ಲಾಮಿಕ್ ಕಲಾ ಮತ್ತು ಸಾಹಿತ್ಯ ಸ್ಪರ್ಧೆಯಲ್ಲಿ SKSBV ಅಂಗೀಕರಿಸಿದ 4 ಮದರಸ ವಿದ್ಯಾರ್ಥಿಗಳು 6 ವಿಭಾಗಗಳಾದ ಕಿಡ್ಸ್, ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಸೂಪರ್ ಸೀನಿಯರ್ ಮತ್ತು ಜನರಲ್ ಗ್ರೂಪ್ ವಿಭಾಗಗಳಲ್ಲಿ ಸ್ಪರ್ಧಿಸಿದರು. ಎಲ್ಲ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಉತ್ಸಾಹದಿಂದ ಪ್ರದರ್ಶಿಸಿದರು.
ಈ ಮಹತ್ವದ ಕಾರ್ಯಕ್ರಮಕ್ಕೆ SKSSF ವಿಟ್ಲ ವಲಯ ಪ್ರಧಾನ ಕಾರ್ಯದರ್ಶಿ ಉಮರ್ ದಾರಿಮಿ ಅವರು ದುವಾ ಮೂಲಕ ಚಾಲನೆ ನೀಡಿದರು, ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬರು ಮತ್ತು ಮುದರ್ರಿಸ್ ದಾವೂದುಲ್ ಹಕೀಂ ಹನೀಫಿ ಉಸ್ತಾದ್ ಅವರು ಮಕ್ಕಳಿಗೆ ಶುಭಾಶಯ ಕೋರಿದರು.
ಮದರಸ ಚಾಂಪಿಯನ್‌ಶಿಪ್ ನಲ್ಲಿ ಸಿರಾಜುಲ್ ಹುದಾ ಮದರಸ ನೀರಕ್ಕಣಿ ಪ್ರಥಮ ಸ್ಥಾನ ಮತ್ತು ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲ ದ್ವಿತೀಯ ಸ್ಥಾನವನ್ನು ಪಡೆದವು.
ಕಾರ್ಯಕ್ರಮದಲ್ಲಿ ವಿಟ್ಲ ವಲಯದ ಅಧ್ಯಕ್ಷ ಅಶ್ರಫ್ ಕುಂಡಡ್ಕ, ವಿಟ್ಲ ಯೂನಿಟ್ ಅಧ್ಯಕ್ಷ ಬಷೀರ್ ಗಮಿ, ಯೂನಿಟ್ ಪ್ರಧಾನ ಕಾರ್ಯದರ್ಶಿ ರವೂಫ್ ಸೇರಾಜೆ, ಯೂನಿಟ್ ಕೋಶಾಧಿಕಾರಿ ಹಂಝ ಕಾಶಿಮಟ, ಹಾಗೂ ತೀರ್ಪುಗಾರರಾಗಿ ಕೆ.ಎಂ.ಎ. ಕೊಡುಂಗಾಯಿ, ವಿಟ್ಲ ವಲಯ ಸರ್ಗಲಯ ಚೇರ್ಮನ್ ಅನ್ಸಾರ್ ಅಝ್ಹರಿ ಕುಕ್ಕಾಜೆ ಮತ್ತು ಉಮರುಲ್ ಫಾರೂಖ್ ಮುಸ್ಲಿಯಾರ್ ಸಜೀಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆ. ಇಸ್ಮಾಯಿಲ್ ಹನೀಫೀ, ಹನೀಫ್ ಲತೀಫಿ ಉಸ್ತಾದ್, ನೀರಕ್ಕಣಿ ಮದರಸ ಅಧ್ಯಕ್ಷ ಅಬ್ದುಲ್ಲಾ ಕೊಡಪದವು, ಪ್ರಧಾನ ಕಾರ್ಯದರ್ಶಿ ಶಾಫಿ ಗಮಿ, ಕೋಶಾಧಿಕಾರಿ ಕೆ. ಮೊಯ್ದೀನ್ ಹಾಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ಮಾಡಲಾಯಿತು.




