May 11, 2026

ಮಂಗಳೂರು: ಮೊಬೈಲ್‌ ಕಿತ್ತುಕೊಂಡ ಪೋಷಕರು: ಮನೆ ಬಿಟ್ಟು ಹೋದ ವಿದ್ಯಾರ್ಥಿ

0
image_editor_output_image-348527331-1728637100325.jpg

ಮಂಗಳೂರು: ಮನೆಯವರು ಮೊಬೈಲ್‌ ಕಿತ್ತುಕೊಂಡ ಕಾರಣ ಪಿಯುಸಿ ವಿದ್ಯಾರ್ಥಿಯೋರ್ವ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಈತನಿಗೆ ನಿರಂತರವಾಗಿ ಮೊಬೈಲ್‌ ನೋಡುವ ಚಟವಿತ್ತು. ಸೆ. 25ರಂದು ಮನೆಯಲ್ಲಿರುವಾಗ ಅವನ ಬಳಿಯಿದ್ದ ಮೊಬೈಲ್‌ ಅನ್ನು ಮನೆಯವರು ತೆಗೆದುಕೊಂಡಿದ್ದು, ಆ ವಿಚಾರವಾಗಿ ಮಾತುಕತೆ ನಡೆದಿತ್ತು.

ಅನಂತರ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಮಹಮ್ಮದ್‌ ಯಾಸೀನ್‌ ಕಾಲೇಜಿಗೆ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ.

5.2 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು, ಸಾಧಾರಣ ಶರೀರ, ಕೋಲುಮುಖ ಹೊಂದಿದ್ದು ನೀಲಿ ಮತ್ತು ಹಸುರು ಬಣ್ಣದ ನ್ಪೋರ್ಟ್ಸ್ ಟಿ ಶರ್ಟ್‌, ನೀಲಿ ಬಣ್ಣದ ಪ್ಯಾಂಟ್‌ ಹಾಗೂ ಎಡಕೈಗೆ ಸಿಲ್ವರ್‌ ಕಲರ್‌ ವಾಚ್‌ ಧರಿಸಿದ್ದ.

ತುಳು, ಕನ್ನಡ, ಬ್ಯಾರಿ ಭಾಷೆಗಳನ್ನು ಮಾತನಾಡುತ್ತಾನೆ. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!