March 18, 2026

ಮಂಗಳೂರು: ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಖಾಸಗಿ ಬಸ್: ವೀಡಿಯೊ ವೈರಲ್

0
image_editor_output_image-1867574494-1728627316910.jpg

ಮಂಗಳೂರು: ಕಾರ್ಕಳ-ಮಂಗಳೂರು ನಡುವೆ ಸಂಚರಿಸುವ ಬಸ್‌ನ್ನು ಅದರ ಚಾಲಕ ನಿರಂತರ ಅಜಾಗರೂಕತೆಯಿಂದ, ಅಡ್ಡಾದಿಡ್ಡಿ ಚಲಾಯಿಸಿದ ಹಲವು ವೀಡಿಯೋ ಗಳು ವೈರಲ್ ಆಗಿದೆ.

ಈ ಹಿನ್ನೆಲೆಯಲ್ಲಿ ಬಸ್ ಮತ್ತು ಅದರ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬಸ್ ಚಾಲಕನ ಲೈಸನ್ಸ್ ನ್ನು ಆರ್.ಟಿ.ಒ. ಕ್ಯಾನ್ಸಲ್ ಮಾಡಿದೆ.

ಕಾರ್ಕಳ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ ಚಾಲಕ ಮಹಮ್ಮದ್ ಇಸ್ಮಾಯಿಲ್ ರ‌್ಯಾಶ್ ಆಗಿ ಡ್ರೈವಿಂಗ್ ಮಾಡುತ್ತಿದ್ದ. ಈತ ಪ್ರಮುಖ ರಸ್ತೆಯಲ್ಲೇ ಅಡ್ಡಾದಿಡ್ಡಿಯಾಗಿ ಬಸ್ ಅನ್ನು ಓಡಿಸುತ್ತಿದ್ದ. ಇದೀಗ ಮೂಡಬಿದಿರೆಯಿಂದ ಮಂಗಳೂರು ದಾರಿಯ ತೋಡಾರ್‌ನಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡಿದ್ದ. ಅತಿಯಾದ ವೇಗದಲ್ಲಿ ಬಸ್‌ ಅನ್ನು ಚಲಾಯಿಸುತ್ತಿದ್ದುದನ್ನು ಇತರ ವಾಹನ ಸವಾರರು ವಿಡಿಯೋ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!