ಗಾಝಾ ಪರಿಸ್ಥಿತಿ ನಿಮಗೂ ಬರಲಿದೆ: ಲೆಬನಾನ್ ಗೆ ಬೆದರಿಕೆ ಹಾಕಿದ ಇಸ್ರೇಲ್
ಜೆರುಸಲೇಂ: ಲೆಬನಾನ್ ನಲ್ಲಿರುವ ಹಿಜ್ಬುಲ್ಲಾ ವಿರುದ್ದ ಭಯೋತ್ಪಾದನಢ ದಾಳಿ ಮುಂದುವರೆಸಿರುವ ಇಸ್ರೇಲ್ ಇದೀಗ ಲೆಬನಾನ್ ಗೆ ಬೆದರಿಕೆ ಹಾಕಿದೆ.
ಗಾಝಾದಂತಹ ವಿನಾಶಕಾರಿ ಪರಿಸ್ಥಿತಿ ಎದುರಾಗಲಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ.
ಲೆಬನಾನ್ ಕರಾವಳಿಯ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾದ ವಿರುದ್ಧ ಭೂ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ.
ಗಾಜಾದಂತಹ ವಿನಾಶಕಾರಿ ಸ್ಥಿತಿ ಎದುರಾಗುವ ಮುನ್ನ ನಿಮಗೆ ಲೆಬನಾನ್ ಅನ್ನು ಉಳಿಸುವ ಅವಕಾಶವಿದೆ. ಯುದ್ಧವನ್ನು ಕೊನೆಗೊಳಿಸಲು ನಿಮ್ಮ ದೇಶವನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಲೆಬನಾನಿನ ಜನರಿಗೆ ನೆತನ್ಯಾಹು ಕರೆ ನೀಡಿದ್ದಾರೆ.