ಸಿಎಂ ವಾಹನ ಸಂಚಾರಕ್ಕೆ ಅಡ್ಡಿ : ಶಾಸಕ ಜನಾರ್ದನ ರೆಡ್ಡಿಯ ಕಾರು ವಶಕ್ಕೆ ಪಡೆದ ಪೊಲೀಸರು
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳುವ ವೇಳೆ ಝೀರೊ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದರಿಂದ ಶಾಸಕ ಜನಾರ್ದನ ರೆಡ್ಡಿ ಅವರ ಕಾರು ಚಾಲಕ ಹಾಗೂ ರೆಡ್ಡಿ ಅವರ ಇಬ್ಬರು ಆಪ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಳೆದ ಶನಿವಾರ ಸಂಜೆ ಸಿಂಧನೂರಿನಿಂದ ಕೊಪ್ಪಳದ ಬಸಾಪೂರನತ್ತ ತೆರಳುತ್ತಿದ್ದಾಗ ಝೀರೋ ಟ್ರಾಫಿಕ್ ನಿಯಮ ಉಲ್ಲಂಘಿಸಿ ಏಕಮುಖ ರಸ್ತೆಯಲ್ಲಿ ಕಾರು ಚಲಾಯಿಸಿದ ಆರೋಪದಡಿ ಜನಾರ್ದನ ರೆಡ್ಡಿ ಕಾರು ಚಾಲಕ ಹಾಗೂ ಇಬ್ಬರು ಆಪ್ತರ ವಿರುದ್ಧ ನಗರದ ಸಂಚಾರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮಂಗಳವಾರ ರೆಡ್ಡಿ ಅವರ ರೇಂಜ್ ರೋವರ್ ಕಾರು ಸೇರಿ ಆಪ್ತರ ಎರಡು ಕಾರುಗಳನ್ನು ಜನಾರ್ದನ ರೆಡ್ಡಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.





