February 4, 2026

ಮಂಗಳೂರು: ಖಾಸಗಿ ಬಸ್ಸಿಗೆ ಇಸ್ರೇಲ್‌ ಹೆಸರು; ತೀವ್ರ ಆಕ್ಷೇಪ

0
image_editor_output_image-1942166117-1728280926123.jpg

ಮಂಗಳೂರು: ‘ಇಸ್ರೇಲ್ ಟ್ರಾವೆಲ್ಸ್’ ಎಂಬ ಹೆಸರು ಮುಲ್ಕಿ-ಮೂಡುಬಿದಿರೆ ಸಂಚರಿಸುವ ಖಾಸಗಿ ಬಸ್ಸಿಗೆ ಇಟ್ಟಿದಕ್ಕೆ ಅಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಆ ಹೆಸರನ್ನೇ ಬದಲಾಯಿಸಲಾಗಿದೆ.

ಇಸ್ರೇಲ್‌ನಲ್ಲಿ ಸುಮಾರು 12 ವರ್ಷಗಳಿಂದ ಉದ್ಯೋಗದಲ್ಲಿರುವ ಮೂಲತಃ ಕಟೀಲಿನವರಾದ ಲೆಸ್ಟರ್ ಕಟೀಲು ಅವರು ಮಂಗಳೂರಿನಲ್ಲಿ ಬಸ್ ಖರೀದಿಸಿ ಅದಕ್ಕೆ ‘ಇಸ್ರೇಲ್ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದರು.

ಇತ್ತೀಚಿಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಉಂಟಾಗಿದ್ದ ಹಿನ್ನಲೆಯಲ್ಲಿ ಕೆಲವರು ‘ಇಸ್ರೇಲ್ ಟ್ರಾವೆಲ್ಸ್’ ಹೆಸರಿಗೆ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಲೆಸ್ಟರ್ “ಇಸ್ರೇಲ್ನಲ್ಲಿ ಕೆಲಸ ಮಾಡಿದ ಹಾಗೂ ಆ ದೇಶದ ವ್ಯವಸ್ಥೆಯನ್ನು ನೋಡಿ ಅಭಿಮಾನದಿಂದ ಬಸ್ಸಿಗೆ ಇಸ್ರೇಲ್ ಹೆಸರಿಟ್ಟಿದ್ದೆ. ಇದಕ್ಕೆ ಆಕ್ಷೇಪ ವ್ಯಕ್ತವಾದುದರಿಂದ ಬೇಸರವಾಗಿ ಬಸ್ ಹೆಸರು ಬದಲಿಸಿದ್ದೇನೆ. ಜೇರುಸಲೆಂ ಪವಿತ್ರ ಭೂಮಿ. ಅದು ಇಸ್ರೇಲ್‌ನಲ್ಲಿ ಇದೆ” ಎಂದರು.

‘ಇಸ್ರೇಲ್ ಟ್ರಾವೆಲ್ಸ್’ ಹೆಸರಿಗೆ ವಿರೋಧ ವ್ಯಕ್ತವಾಗಿರುವುದು, ಪೊಲೀಸರ ಗಮನಕ್ಕೆ ಬಂದಿದ್ದು, ಮುಂದೆ ದ್ವೇಷ ಹೊರಡುವುದು ಬೇಡವೆಂಬ ಕಾರಣಕ್ಕೆ ಪೊಲೀಸರು ಬಸ್‌ನ ಮಾಲಿಕನಿಗೆ ಹೆಸರು ಬದಾಲಾಯಿಸಲು ಸೂಚನೆ ನೀಡಿದ್ದರು. ಹಾಗಾಗಿ ಲೆಸ್ಟರು ‘ಜೇರುಸಲೆಂ ಟ್ರಾವೆಲ್ಸ್’ ಎಂದು ಹೆಸರಿಟ್ಟಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!