March 22, 2026

ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ದನದ ಮಾಂಸ ಮಾರಾಟ: ಆರೋಪಿ ನವೀನ್ ಬಂಧನ

0
image_editor_output_image-2078227982-1728280467803.jpg

ಚಾಮರಾಜನಗರ: ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಹನೂರು ತಾಲೂಕಿನ ಪುದೂರು ಗ್ರಾಮದ ನವೀನ್ (31) ಅನ್ನು ಬೆಟ್ಟದ ಪೊಲೀಸರು ಭಾನುವಾರ (ಅ.6) ಬಂಧಿಸಿದ್ದಾರೆ.

ಪುದೂರಿನಿಂದ ದನದ ಮಾಂಸ ತಂದು ಕ್ಷೇತ್ರದ ಕಲ್ಯಾಣ ಮಂಟಪದ ಬಳಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

23 ಕೆ.ಜಿ ದನದ ಮಾಂಸ ಮತ್ತು ಮಾಂಸ ಸಾಗಾಣೆಗೆ ಬಳಸಿದ್ದ ದ್ವಿಚಕ್ರ ವಾಹನ ವಶ ಪಡೆದುಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ನವೀನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ರಜನಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

Leave a Reply

Your email address will not be published. Required fields are marked *

error: Content is protected !!