March 22, 2026

ಕೈಕೊಟ್ಟ ಕೃಷಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ

0
image_editor_output_image2809983-1728016033277.jpg

ಚಾಮರಾಜನಗರ: ಸಾಲ ಬಾಧೆಯಿಂದ ಬೇಸತ್ತು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕಾಳನಹುಂಡಿ ಗ್ರಾಮದಲ್ಲಿ ನಡೆದಿದೆ.

ಕಾಳನಹುಂಡಿ ಗ್ರಾಮದ ರಮೇಶ್(50) ಮೃತ ವ್ಯಕ್ತಿ.
ಈತ ಸುಮಾರು ಐದರಿಂದ ಆರು ಲಕ್ಷ ರೂ.ಗಳನ್ನು ಖಾಸಗಿ ಬ್ಯಾಂಕ್ ಹಾಗೂ ಕೈ ಸಾಲ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ.

ಕಳೆದ ಮೂರು ವರ್ಷದಿಂದ ಜೋಳ, ಸೂರ್ಯಕಾಂತಿ, ಈರುಳ್ಳಿ ಫಸಲು ಕೈ ಸೇರದ ಹಿನ್ನೆಲೆ ಮನನೊಂದು ತನ್ನ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!