February 4, 2026

ಬಂಟ್ವಾಳ: ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ

0
image_editor_output_image1755851487-1727956505572

ಬಂಟ್ವಾಳ: ಮಾತೃ ಭಾಷೆಯಲ್ಲಿ ಸಂವಹನ ಕಡಿಮೆಯಾದಾಗ ಮೂಲ ಪದಗಳು ಕಣ್ಮರೆಯಾಗಿ ಭಾಷಾ ಸಂರಚನೆಗೆ ಧಕ್ಕೆಯಾಗುತ್ತದೆ, ಆ ಮೂಲಕ ಭಾಷೆ ಅಳಿವಿನ ಹಾದಿ ಹಿಡಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಸ್ ಅಭಿಪ್ರಾಯಪಟ್ಟರು.

ಅವರು ಸಮನ್ವಯ ಶಿಕ್ಷಕರ ಸಂಘದ ವತಿಯಿಂದ ಗುರುವಾರ ಬ್ರಹ್ಮರಕೂಟ್ಲು ಸುಹಾ ನಿವಾಸದಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷೆಯ ವೈಶಿಷ್ಟ್ಯತೆಗಳ
ಕುರಿತು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತ ಮೊಹಮ್ಮದ್ ತುಂಬೆ, ಬ್ಯಾರಿ ಭಾಷಾ ದಿನಾಚರಣೆಯ ಶುಭಾಶಯ ಕೋರಿದರು.

ಸಮಾರಂಭದಲ್ಲಿ ಸಮನ್ವಯ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಸೀರ್ ಅಡೆಕಲ್, ಮೊಹಮ್ಮದ್ ಕೊಲ್ಲರಕೋಡಿ, ಅಬ್ದುಲ್ ಹಮೀದ್ ಮಾಣಿ, ನೂರುದ್ದೀನ್ ಅಕ್ಕರಂಗಡಿ, ಹೈದರ್ ಪಡಂಗಡಿ, ತಾಹಿರಾ ತುಂಬೆ, ಜಮೀಲಾ ತುಂಬೆ, ಲುಕ್ಮಾನ್ ವಿಟ್ಲ, ಶೇಖ್ ಆದಂ ಸಾಹೇಬ್ ನೆಲ್ಯಾಡಿ, ಹಸೀನಾ ಮಲ್ನಾಡ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಹಾರೀಶ್ ಬಾಂಬಿಲ ಸ್ವಾಗತಿಸಿ, ಸಂಘದ ಬಂಟ್ವಾಳ ಘಟಕಾಧ್ಯಕ್ಷ ಮೊಹಮ್ಮದ್ ಮನಾಝಿರ್ ಮುಡಿಪು  ವಂದಿಸಿದರು. ಶಿಕ್ಷಕ ಅಕ್ಬರ್ ಉಳಿಬೈಲು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!