ಕೊರಟಗೆರೆ: ಚಿನ್ನ ನೀಡುವುದಾಗಿ ಹಣ ಪಡೆದು ವಂಚನೆ: ಮೂವರು ಆರೋಪಿಗಳ ಬಂಧನ
ಕೊರಟಗೆರೆ: ಚಿನ್ನ ನೀಡುವುದಾಗಿ ಹಣ ಪಡೆದು ವಂಚಿಸಿರುವ ಮೂವರು ಆರೋಪಿಗಳನ್ನು ಕೊರಟಗೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಜಿ.ನಾಗೇನಹಳ್ಳಿ ಗ್ರಾಮದ ಬಳಿ ಆಂಧ್ರ ಮೂಲದ ಗುತ್ತಿ ಗ್ರಾಮದ ವಾಸಿ ಶಾಖಾವಲಿ ಅವರಿಗೆ ಚಿನ್ನ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಎರಡು ದಿನದಲ್ಲಿ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಪುರದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ವ್ಯಾಪಾರಿ ರಾನಾ ಯುವರಾಜ( 22), ಕನ್ನೇಶ( 45), ರಾಜು ಬಾಬು(34) ಅವರನ್ನು ಬಂಧಿಸಿದ್ದು, ಸಂದಿಲ್ ತಲೆಮರೆಸಿಕೊಂಡಿದ್ದಾನೆ




