February 4, 2026

ಕೊಡಗು | ಪ್ರೇಮಾ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಪುತ್ತೂರಿನಲ್ಲಿ ಬಂಧನ

0
image_editor_output_image-1201229941-1727415452971.jpg

ಮಂಗಳೂರು: ಕೊಡಗು ಜಿಲ್ಲೆಯ ಶ್ರೀಮಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ 2022ರ ಫೆಬ್ರವರಿ ತಿಂಗಳಿನಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಡಗು ಪೊಲೀಸರು ಸುಮಾರು ಎರಡು ವರ್ಷಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಿದ್ದಾರೆ.

ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ರಾಜೇಶ್‌ (42) ಬಂಧಿತ ಆರೋಪಿ.

ಅದೇ ಗ್ರಾಮದ ನಿವಾಸಿ ಪ್ರೇಮಾ ಎಂಬಾಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಲ್ಲದೆ ಜತೆಗಿದ್ದ ಪ್ರೇಮಾ ಅವರ ಸಹೋದರಿ ವೀಣಾ ಅವರ ಮೇಲೂ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದ ಆರೋಪ ರಾಜೇಶ್‌ ಮೇಲಿತ್ತು..

Leave a Reply

Your email address will not be published. Required fields are marked *

You may have missed

error: Content is protected !!