November 22, 2024

ಝಕರಿಯಾ ಜೋಕಟ್ಟೆರಿಗೆ “RAMCon” ಸಾಧಕ ಪ್ರಶಸ್ತಿ

0

ಒಂದು ಕಾಲದಲ್ಲಿ ಕೇವಲ ಎರಡಂಕೆಯ ಮಾಸಿಕ ಸಂಬಳಕ್ಕೆ ಕೂಲಿ ಕೆಲಸ ಮಾಡುತ್ತಿದ್ದ ಬ್ಯಾರಿ ಸಮುದಾಯದ ಯುವಕ ಸೌದಿಗೆ ತೆರಳಿ ಏಳೂವರೆ ಸಾವಿರ ಜನರಿಗೆ ಉದ್ಯೋಗ ನೀಡಿ “ಅಲ್ ಮುಝೈನ್” ಹೆಸರಲ್ಲಿ ಸಾಮ್ರಾಜ್ಯ ಸ್ಥಾಪಿಸಿರುವ ಝಕರಿಯಾ ಜೋಕಟ್ಟೆ ಸೌದಿ ಅರೇಬಿಯಾದ ಪ್ರತಿಷ್ಟಿತ RAMCon ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಸೌದಿ ಅರೇಬಿಯಾದ ಅಲ್ ಖೋಬರ್ ಪಂಚತಾರಾ ಹೋಟೆಲ್ ಮೂವ್ ಇನ್ ಪಿಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಮ್ಕೋನ್ (RAMCon) ವಿಶ್ವಾಸಾರ್ಹತೆ ಮತ್ತು ನಿರ್ವಹಣೆ ಸಮಾವೇಶ ಹಾಗೂ ಪ್ರದರ್ಶನ – 2024 ಸಮಾರಂಭದಲ್ಲಿ ಕಠಿಣ ಸಾಧನೆ ಮತ್ತು ಪರಿಶ್ರಮಕ್ಕಾಗಿ “ಅಲ್ ಮುಝೈನ್” ಗಲ್ಫ್ ಸೌದಿ ಕಾಂಟ್ರಾಕ್ಟರ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಝಕರಿಯಾ ಬಜ್ಪೆ (ಜೋಕಟ್ಟೆ) ಅವರಿಗೆ RAMCon ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಝಕರಿಯಾ ಜೋಕಟ್ಟೆ ಅವರು ಈ ಹಿಂದೆ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿ, ಗೌರವಗಳಿಗೆ ಪಾತ್ರರಾದ ಕರಾವಳಿಯ ಅನಿವಾಸಿ ಉದ್ಯಮಿ ಮತ್ತು ಉತ್ತಮ ಸಂಘಟಕ. ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಹಿದಾಯ ಫೌಂಡೇಶನ್ ನ ಛೆಯರ್ಮೇನ್ ಆಗಿ ಹಲವಾರು ಅಶಕ್ತರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಅವರ ಉದ್ಯಮ ಮತ್ತು ಫ್ಯಾಮಿಲಿ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮತ್ತು ಕರಾವಳಿಯ ಸಂಸ್ಕೃತಿಯನ್ನು ಸೌದಿ ಅರೇಬಿಯಾದ ನೆಲದಲ್ಲಿ ಪಸರಿಸುವಲ್ಲಿ ಹತ್ತುಹಲವು ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಝಕರಿಯಾ ನೇತೃತ್ವದಲ್ಲಿ ಸೌದಿಯ ನಾನಾ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!