ಮಂಗಳೂರು: ಪಾನಿಪುರಿ ತಿನ್ನುತ್ತಿದ್ದ ಯುವತಿಯ ಮೊಬೈಲ್ ಫೊನ್ ಕಳವು: ಕಳ್ಳನ ಕೈ ಚಳಕ ಸಿಸಿ ಟಿವಿ ಯಲ್ಲಿ ಸೆರೆ
ಮಂಗಳೂರು: ಕಾಲೇಜು ಮುಗಿಸಿ ವಿದ್ಯಾರ್ಥಿನಿಯರು ತಮ್ಮ ಪಾಡಿಗೆ ತಾವು ಪಾನಿಪುರಿ ತಿನ್ನುತ್ತಾ ಇದ್ದರು. ಅಷ್ಟರಲ್ಲಿ ಅವರ ಬಳಿ ಅಮಾಯಕನಂತೆ ಬಂದ ಯುವಕನೋರ್ವ ಹುಡುಗಿಯು ಬ್ಯಾಗ್ ಮೇಲೆ ಇಟ್ಟಿದ್ದ ಮೊಬೈಲನ್ನು ಅವಳಿಗೆ ಅರಿವಿಲ್ಲದಂತೆ ಕದ್ದ ಘಟನೆ ಬೆಳಕಿಗೆ ಬಂದಿದೆ.
ಪಕ್ಕದಲ್ಲೇ ಕುಳಿತು ಪಾನಿಪುರಿ ತಿನ್ನುವಂತೆ ನಟಿಸಿ ಮೆಲ್ಲನೆ ಮೊಬೈಲನ್ನು ಎಗರಿಸಿರುವ ವಿಷಯ ಅವಳಿಗೆ ಗೊತ್ತಾಗಲು ತುಂಬಾ ಸಮಯ ಬೇಕಾಯಿತು ಎನ್ನಲಾಗಿದೆ.
ಕಳ್ಳನ ಕೈ ಚಳಕ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು, ಫೊಟೋಸ್ ಫುಲ್ ವೈರಲ್ ಆಗುತ್ತಿದೆ.





