February 3, 2026

ಮಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರಿಗೆ ಕಿರುಕುಳ: ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿದ ಯುವತಿಯರು

0
image_editor_output_image-1406676245-1727245118029.jpg

ಮಂಗಳೂರು: ಹಾಡು ಹಗಲಲ್ಲೇ ಹೆಣ್ಣುಮಕ್ಕಳು ರಸ್ತೆಯಲ್ಲಿ ನಡೆದಾಡುವುದು ಹೇಗೆ ಎಂಬ ಪ್ರಶ್ನೆ ಮೂಡುವಂತಹ ಹೇಯ ಘಟನೆಯೊಂದು ಮಂಗಳೂರಿನಲ್ಲಿ ನಡೆದು ಹೋಗಿದೆ.

ಸೆ.24 ಬೆಳಗ್ಗೆ 10.30 ರ ಸುಮಾರಿಗೆ ಮಂಗಳೂರಿನ ನವಭಾರತ್ ಸರ್ಕಲ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಧರ್ಭ ಯುವತಿಯರ ಬಳಿ ಬಂದ ಕಾಮುಕ ಯುವತಿಯರಿಗೆ ಕಿರುಕುಳ ನೀಡಿದ್ದಲ್ಲದೆ ಹಣ ಕೊಡುತ್ತೇನೆ ಬರುತ್ತೀರಾ ಅಂತಾ ಸೆಕ್ಸ್ ಆಫರ್ ಕೂಡ ನೀಡಿದ್ದಾನೆ.

ತಕ್ಷಣ ಯುವತಿಯರು ಯುವಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಆತನನ್ನು ತಳ್ಳಿ, ಶರ್ಟ್ ಬಿಚ್ಚಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ಶಬರಿ ಎಂಬಾತನ‌ ಮೇಲೆ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!