March 22, 2026

ಕೊರಿಯರ್‌ ಕಂಪನಿ ಹೆಸರಿನಲ್ಲಿ 30 ಲಕ್ಷ ರೂ. ವಂಚನೆ: ಮೂವರು ಆರೋಪಿಗಳ ಬಂಧನ

0
image_editor_output_image-1804572565-1727158097382.jpg

ಬೆಂಗಳೂರು: ಫೆಡೆಕ್ಸ್‌ ಹಾಗೂ ಡಿಎಚ್‌ಎಲ್‌ ಇಂಟರ್‌ ನ್ಯಾಷನಲ್‌ ಕೊರಿಯರ್‌ ಕಂಪನಿ ಹೆಸರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿ­ಯೊಬ್ಬರಿಗೆ “ಹೌಸ್‌ ಅರೆಸ್ಟ್‌’ ಮಾಡಿ 30 ಲಕ್ಷ ರೂ. ಸುಲಿಗೆ ಮಾಡಿದ ಮೂವರು ವಂಚಕರು ದಕ್ಷಿಣ ವಿಭಾಗದ ಸೈಬರ್‌ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಡಿ.ಜೆ.ಹಳ್ಳಿ ನಿವಾಸಿಗಳಾದ ಮುಕರಾಮ್‌ (32), ಮನ್ಸೂರ್‌ (30) ಮತ್ತು ಥಣಿಸಂದ್ರ ನಿವಾಸಿ ಇಬ್ರಾಹಿಂ (34) ಬಂಧಿತರು.

ಆರೋಪಿಗಳಿಂದ 11.75 ಲಕ್ಷ ರೂ. ನಗದು ವಶಕ್ಕೆ ಪಡೆಯ­ಲಾಗಿದೆ. ತಲೆ ಮರೆಸಿಕೊಂಡಿರುವ ಇತರೆ ಆರೋಪಿ­ಗಳು ಮುಂಬೈ, ಬೆಂಗಳೂರು ಹಾಗೂ ವಿದೇಶದ­ಲ್ಲಿರುವ ಮಾಹಿತಿಯಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ‌ ಸುದ್ದಿಗೋ­ಷ್ಠಿಯಲ್ಲಿ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!