February 3, 2026

ಗಣೇಶನನ್ನು ವಿಸರ್ಜಿಸಿ ಮನೆಗೆ ಬರುವಾಗ ಅಪಘಾತ: ಯುವಕ ಸಾವು

0
image_editor_output_image-285961618-1727157876731.jpg

ಗಂಗಾವತಿ: ಗಣೇಶನನ್ನು ವಿಸರ್ಜಿಸಿ ಮನೆಗೆ ಆಗಮಿಸುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಬಸಾಪಟ್ಟಣ ರಸ್ತೆಯ ಕೆ ಎಲ್ ಇ ಕಾಲೇಜ್ ಬಳಿ ಸೋಮವಾರ ಮಧ್ಯರಾತ್ರಿ ನಡೆದಿದೆ.

ನವೀನ್ ಕುಮಾರ್ (27) ಎಂಬ ಯುವಕ ನಗರದ ಉಪ್ಪಾರ ಓಣಿಯ ಭಗಿರಥದಲ್ಲಿ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಮಾಡಿ ಬೈಕ್ ನಲ್ಲಿ ವಾಪಸ್ ಬರುವ ವೇಳೆ ಬಸಾಪಟ್ಟಣ ರಸ್ತೆಯ ಕೆಎಲ್ಇ ರಸ್ತೆಯಲ್ಲಿ ಟ್ಯಾಂಕರ್ ಲಾರಿ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ವೈದ್ಯಕೀಯ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!