February 3, 2026

ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ನಾಲ್ವರು ಸಾವು

0
image_editor_output_image1272509603-1727157362187.jpg

ಯಾದಗಿರಿ: ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಸಿಡಿಲು ಬಡಿದು ನಾಲ್ವರು ಸಾವನಪ್ಪಿದ ಘಟನೆ ಜಿನಕೇರಾ ತಾಂಡಾದಲ್ಲಿ ನಡೆದಿದೆ.

ಮೃತರನ್ನು ಕಿಶನ್‌ ನಾಮಣ್ಣ ಜಾಧವ (33), ಚನ್ನಪ್ಪ ನಾಮಣ್ಣ ಜಾಧವ (24), ಸುನಿಬಾಯಿ ರಾಠೋಡ (30), ನೇನು ನಿಂಗಪ‍್ಪ ಜಾಧವ (18) ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಂಡಾದ ಜಮೀನಿನಲ್ಲಿ ಈರುಳ್ಳಿ ಸಸಿ ನಾಟಿ ಮಾಡುತ್ತಿರುವ ವೇಳೆ ಮಳೆ ಬಂದಿದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು ಜಮೀನಿನಲ್ಲಿರುವ ದುರುಗಮ್ಮ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ.

ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ. ಮೌನೇಶ ಉನ್ನಪ್ಪ, ಗಣೇಶ ಮೌನೇಶ, ದರ್ಶನ ಕಿಶನ್‌ ಸಿಡಿಲಿನಿಂದ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಯಾದಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!