September 20, 2024

ಕಾಸರಗೋಡು: ಸ್ಲೈಡಿಂಗ್ ಗೇಟ್ ಬಿದ್ದು 2 ವರ್ಷದ ಬಾಲಕ ಮೃತ್ಯು

0

ಕಾಸರಗೋಡು: ಐದು ಅಡಿ ಎತ್ತರದ ಸ್ಲೈಡಿಂಗ್ ಗೇಟ್ ಬಿದ್ದು ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಉದ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಮೃತ ಬಾಲಕನನ್ನು ಉದ್ಮಾ ಪಂಚಾಯತ್‌ನ ಪಲ್ಲಂ ತೆಕ್ಕೆಕ್ಕರ ವಾರ್ಡ್‌ನ ನಿವಾಸಿ ರೈಮಾ ಮತ್ತು ಮಾಹಿನ್ ರಫಿ ದಂಪತಿಯ ಪುತ್ರ ಅಬು ತಾಹಿರ್ ಎಂದು ಗುರುತಿಸಲಾಗಿದೆ. ರಫಿ ಅವರು ಶುಕ್ರವಾರ ದುಬೈನಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ಮರಳಬೇಕಿತ್ತು.

ಈ ಹಿನ್ನಲೆ ಮಾಂಙಾಡ್ ನ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ಅವರ ಮನೆಯ ಗೇಟ್ ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಕಬ್ಬಿಣದ ಗೇಟ್ ಬಿದ್ದಿದ್ದು, ಅದರಡಿ ಸಿಲುಕಿದ ಬಾಲಕನನ್ನು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!