March 21, 2026

ಬಸ್, ಖಾಸಗಿ ಶಾಲೆಯ ಬಸ್ ನಡುವೆ ಅಪಘಾತ: ಇಬ್ಬರು ಮಕ್ಕಳು ಮೃತ್ಯು, ಹಲವರು ಗಂಭೀರ

0
image_editor_output_image988535914-1725521072566.jpg

ರಾಯಚೂರು: ಮಾನ್ವಿ ತಾಲೂಕಿನ ಕಪಗಲ್ ಹತ್ತಿರ ಸರ್ಕಾರಿ ಬಸ್ ಹಾಗೂ ಖಾಸಗಿ ಶಾಲೆಯ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಮಕ್ಕಳು ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಘಟನೆಯ ತೀವ್ರತೆಗೆ ನಾಲ್ಕೈದು ಮಕ್ಕಳ ಕಾಲುಗಳು ಕತ್ತರಿಸಿ ಹೋಗಿವೆ. ಗಂಭೀರ ಗಾಯಗೊಂಡ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಕೆಲವರ ಸ್ಥಿತಿ ಗಂಭೀರವಾಗಿದೆ. ಉಳಿದ ಮಕ್ಕಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!