March 21, 2026

ಮಂಗಳೂರು: ಮದುವೆಯಾಗಲು ನಿರಾಕರಿಸಿದ ಯುವತಿಯ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

0
image_editor_output_image2025323280-1725520335882.jpg

ಮಂಗಳೂರು: ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯನ್ನು ಕೊಂದ ಆರೋಪಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೋಟಗಿ ತಾನದ ಮೂಲದ ಆರೋಪಿ ಸಂದೀಪ್ ರಾಥೋಡ್ (23) ಮೃತ ಅಂಜನಾ ವಸಿಷ್ಟ ಎಂಬಾಕೆಯನ್ನು 2018ರಲ್ಲಿ ಫೇಸ್‌ಬುಕ್ ಮೂಲಕ ಭೇಟಿಯಾಗಿದ್ದ.

ಅವರ ಸ್ನೇಹ ಅಂತಿಮವಾಗಿ ಪ್ರಣಯ ಸಂಬಂಧವಾಗಿ ಬೆಳೆದು ನಂತರ ಇಬ್ಬರೂ ಮದುವೆಯಾಗಲು ಯೋಜಿಸಿದ್ದರು. ಈ ವೇಳೆ ರಾಥೋಡ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆ ಬರೆಯಲು ಮಂಗಳೂರಿಗೆ ಬಂದಿದ್ದರು. ಅಂಜನಳನ್ನು ಕರೆದುಕೊಂಡು ಬಂದು ಅತ್ತಾವರ ಆರನೇ ಕ್ರಾಸ್‌ನಲ್ಲಿರುವ ಪೈಸ್ ಕಾಟೇಜ್‌ನಲ್ಲಿ ತಂಗಿದ್ದು, ಮನೆ ಮಾಲೀಕರಿಗೆ ಈಗಾಗಲೇ ಮದುವೆಯಾಗಿರುವುದಾಗಿ ಬಿಂಬಿಸಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!