ವಿಟ್ಲ: ಮೊಸರು ಕುಡಿಕೆ ಉತ್ಸವ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ
ವಿಟ್ಲ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಕುಳ ಗ್ರಾಮದ ಅಡ್ಯಾಲುವಿನಲ್ಲಿ 15 ನೇ ವರ್ಷದ ಮೊಸರು ಕುಡಿಕೆ ಉತ್ಸವ
ವಿವಿಧ ಆಟೋಟ ಸ್ಪರ್ಧೆಗಳು ಮಕ್ಕಳ್ಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಕುಣಿತ ಭಜನೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಾಧ್ಯ.ಮೋಹನ್ ಗುರ್ಜಿನಡ್ಕ ಧಾರ್ಮಿಕ ಆಚರಣೆಯಲ್ಲಿ ಎಲ್ಲರನ್ನು ಸಮಾನವಾಗಿ ನೋಡಿದಾಗ ಧಾರ್ಮಿಕ ಆಚರಣೆಗೆ ಒಂದು ಮೆರುಗು ಬರಲು ಸಾಧ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ
ಸಂಜೀವ ಪೆಲತ್ತಿಂಜ.ಮಾತನಾಡಿ ಧಾರ್ಮಿಕ ಆಚರಣೆಯಲ್ಲಿ ಒಗ್ಗಟ್ಟು ಮೂಡಿದಾಗ ಇಂತಹ ಕಾರ್ಯಕ್ರಮಗಳು ನಡೆಯಲು ಸಾಧ್ಯ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಯುವಜನ ಒಕ್ಕೂಟದ ಅಧ್ಯಕ್ಷರಾದ ದಿನೇಶ್ ಸಾಲಿಯಾನ್ ಆಗಮಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಆನಂದ ಪೂಜಾರಿ ಅಡ್ಯಾಲು.ಜಯ ಪೂಜಾರಿ ಅಡ್ಯಾಲು.ಚಂದ್ರಕಾಂತ ಅಡ್ಯಾಲು. ಶ್ರೀಮತಿ ಉಮಾ ಆಚಾರ್ಯ ಅಡ್ಯಾಲು.ಶ್ರಿಮತಿ ಶಾರದಾ
ಅಡ್ಯಾಲು, ಪ್ರಶಾಂತ್ ಕೇದಾರ ಕರ್ಗಲ್ಲು . ಉಪಸ್ಥಿತರಿದ್ದರು.
ಅಡ್ಯಾಲು ಮೊಸರು ಕುಡಿಕೆ ಸಮಿತಿ ಮತ್ತು ಯುವ ಪ್ರೆಂಡ್ಸ್.ಕಬಕ.ಇವರ ಸಹಕಾರದೊಂದಿಗೆ ವಿಜ್ರಂಭಣೆಯಿಂದ ಜರುಗಿತು.
ಬೆಳ್ಳಿಗೆ ಕಾರ್ಯಕ್ರಮವನ್ನು ಜಯ ಪೂಜಾರಿ ಅಡ್ಯಾಲು ದೀಪ ಬೆಳಗಿಸಿ ಉದ್ಘಾಟಿಸಿದರು .
ಸೂರ್ಯ ಕೋಟ್ಯಾನ್ ಬನ್ನೂರು.ರವಿ ಕರ್ಗಲ್ಲು ದೀಪಾ ಅಡ್ಯಾಲು ಉಪಸ್ಥಿತರಿದ್ದರು.
ಹರೀಶ್ ಕುಮಾರ್.ಮಹಾಲಿಂಗೇಶ್ವರ ಕನ್ಸ್ಟ್ರಕ್ಷನ್.ಮಿತ್ತೂರು.
ಅಶಿಕ್ ಅಡ್ಯಾಲು.ಸುಧಾಕರ ಬನ್ನೂರು ಕರ್ಗಲ್ಲು.ಪೂವಪ್ಪ ಅಡ್ಯಾಲು.ಸಹಕರಿಸಿದರು.
ಕೇಶವತಿ ಕರ್ಗಲ್ಲು.ವಿಜಯಶ್ರೀ ಕರ್ಗಲ್ಲು.ಉಮಾವತಿ ಕರ್ಗಲ್ಲು.ಪ್ರಾರ್ಥಿಸಿದರು.
ಕಾರ್ಯಕ್ರಮದ ಮೊದಲಿಗೆ
ಪ್ರಶಾಂತ್ ಕರ್ಗಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.





