August 25, 2026

ಸೆ. 5: ವಿಟ್ಲ ಆರ್.ಜೆ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮತ್ತು ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ ಆ್ಯಂಡ್ ಟೆಕ್ಸ್ ಟೈಲ್ಸ್ ಶೋ ರೂಂ ಶುಭಾರಂಭ: ರಾಜಧಾನಿ ಜುವೆಲ್ಲರ್ಸ್ ಇದೀಗ ಆರ್.ಜೆ ಗೋಲ್ಡ್ ಮತ್ತು ಡೈಮಂಡ್ಸ್ ಹೆಸರಿನೊಂದಿಗೆ ಜನರ ಮುಂದೆ ಬರಲಿದೆ.

0
IMG-20240829-WA0006.jpg

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಎಂಪೈರ್ ಮಾಲ್ ನಲ್ಲಿ ಆರ್.ಜೆ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮತ್ತು ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ ಆ್ಯಂಡ್ ಟೆಕ್ಸ್ ಟೈಲ್ಸ್ ಶೊ ರೂಂ ಸೆ. 5ರಂದು ಶುಭಾರಂಭಗೊಳ್ಳಲಿದೆ.

ವಿಟ್ಲದ ಎಂಪೈರ್ ಮಾಲ್ ನಲ್ಲಿ 20 ವರ್ಷಗಳಿಂದ ರಾಜಧಾನಿ ಜುವೆಲ್ಲರ್ಸ್ ಕಾರ್ಯಾಚರಿಸುತ್ತಾ ಬಂದಿದ್ದು, ಹಳೆ ಬೇರು ಹೊಸ ಹೆಸರೊಂದಿಗೆ ಆರ್.ಜೆ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಹೆಸರಿನೊಂದಿಗೆ ಹೊಸ ವಿನ್ಯಾಸ, ಹೊಸ ನಾಮಕರಣದೊಂದಿಗೆ ಜನರ ಮುಂದೆ ಬರಲಿದೆ. ಕಳೆದ ಹಲವಾರು ವರ್ಷಗಳಿಂದ ಚಿನ್ನದ ವ್ಯಾಪಾರದಲ್ಲಿ ಮೇಲುಗೈ ಸಾಧಿಸಿದ್ದ ರಾಜಧಾನಿ ಜುವೆಲ್ಲರಿ ಇದೀಗ ಇನ್ನಷ್ಟು ಪ್ರಗತಿ ಸಾಧಿಸಿ, ಹೊಚ್ಚ ಹೊಸ ಶೊ ರೂಮ್ ನೊಂದಿಗೆ ಶುಬಾರಂಭಗೊಳ್ಳಲಿದೆ.

ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ ಆ್ಯಂಡ್ ಟೆಕ್ಸ್ ಟೈಲ್ಸ್ ಶೊ ರೂಂ:
ವಿಟ್ಲದಲ್ಲಿ ಕಳೆದ 13 ವರ್ಷಗಳಿಂದ ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ ಆ್ಯಂಡ್ ಟೆಕ್ಸ್ ಟೈಲ್ಸ್ ಹವಾನಿಯಂತ್ರಿತ ಶೊ ರೂಂ ವಿನೂತನ ಕಲೆಕ್ಷನ್ ನೊಂದಿಗೆ ನವೀಕರಣಗೊಂಡು ಉದ್ಘಾಟನೆಗೊಳ್ಳಲಿದೆ. ಇಲ್ಲಿ ಮಹಿಳೆಯರ, ಪುರುಷರ, ಮಕ್ಕಳ ಉಡುಪುಗಳು ಉತ್ತಮ ಗುಣಮಟ್ಟದ ಸಂಗ್ರಹ ಇಲ್ಲಿದೆ. ಸೂರತ್, ಅಹಮದಾಬಾದ್, ಮುಂಬೈ, ಡೆಲ್ಲಿ, ಕಲ್ಕತ್ತಾ, ಜಯಪುರದ ಪ್ರಸಿದ್ಧ ಡಿಸೈನರ್ ಗಳಿಂದ ತಯಾರಿಸಿದ ಸರಾರ, ಪೆನ್ಸಿಲ್ ಪ್ಯಾಂಟ್, ಪ್ಲಾಝೊ, ಲೆಹಂಗ, ಗೌನ್ಸ್, ಪ್ಯಾಂಟ್ ಶರ್ಟ್, ಜೀನ್ಸ್, ಕುರ್ತಿಸ್ ಗಳ ಅಪೂರ್ವ ವಿಶೇಷ ಸಂಗ್ರಹ ಇಲ್ಲಿದೆ.

ಉದ್ಘಾಟನೆ ಪ್ರಯುಕ್ತ ಆರ್ ಜೆ ಗೋಲ್ಡ್ ಮತ್ತು ಡೈಮಂಡ್ಸ್ ನಲ್ಲಿ ಮೇಕಿಂಗ್ ಚಾರ್ಜ್ ಶೇ.50 ಆಫರ್, ವಿವಾಹ ಖರೀದಿ ಗ್ರಾಹಕರಿಗೆ 30 ದಿನದ ವರೆಗೆ ಗೋಲ್ಡ್ ಕಾಯಿನ್ ಉಚಿತ, ಏಳು ದಿನ SCRATCH ಮೂಲಕ ಗಿಪ್ಟ್ ಬಾಕ್ಸ್ ಗೆಲ್ಲುವ ಅವಕಾಶ ಇದೆ.

ಉದ್ಘಾಟನಾ ಸಮಾರಂಭದಲ್ಲಿ ಅಲ್ ಹಾಜ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್, ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ವಿಟ್ಲ ಶೋಕಾಮಾತೆಯ ಇಗರ್ಜಿಯ ಧರ್ಮಗುರು ಐವನ್ ಮಿಚಲ್ ರೋಡ್ರಿಗಸ್ ಅವರು ಆಗಮಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!