December 15, 2025

1 ಕೆ.ಜಿ. ಜಿಲೇಬಿಗೆ ಬೇಡಿಕೆಯಿಟ್ಟಿದ್ದ ಪೊಲೀಸ್ ಕಾನ್ ಸ್ಟೇಬಲ್ ಅಮಾನತು

0
image_editor_output_image353344757-1724963377641.jpg

ಉತ್ತರ ಪ್ರದೇಶ: ಬಿಸಿ ಜಿಲೇಬಿಗೆ ಬೇಡಿಕೆ ಇಟ್ಟಿದ್ದ ಪೊಲೋಸ್ ನನ್ನು ಕೆಲಸದಿಂದ ವಜಾ ಆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಡಲು ಬಂದ ಯುವಕನ ಬಳಿ ಪೊಲೀಸ್ ಕಾನ್ಸ್ಟೆಬಲ್ 1 ಕೆಜಿ ಬಿಸಿ ಜಿಲೇಬಿಗೆ ಬೇಡಿಕೆಯಿಟ್ಟಿದ್ದರು. ಆ ವ್ಯಕ್ತಿ ತನ್ನ ಕಳೆದುಹೋದ ಮೊಬೈಲ್ ಬಗ್ಗೆ ದೂರು ದಾಖಲಿಸಲು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಬಹದ್ದೂರ್ಗಢ ಪೊಲೀಸ್ ಠಾಣೆಗೆ ಹೋಗಿದ್ದರು.

ಠಾಣೆಯಲ್ಲಿ ಕುಳಿತಿರುವ ಕಾನ್ಸ್ಟೆಬಲ್ ಆತನ ದೂರನ್ನು ಬರೆದರೂ ಠಾಣೆಯ ಸೀಲ್ ಹಾಕಿರಲಿಲ್ಲ. ತಾನು ಆ ಕಂಪ್ಲೆಂಟ್ಗೆ ಸೀಲ್ ಹಾಕಬೇಕೆಂದರೆ 1 ಕೆಜಿ ಬಿಸಿಯಾದ ಜಿಲೇಬಿ ತಂದುಕೊಡಬೇಕು ಎಂದು ಆ ಪೊಲೀಸ್ ಹೇಳಿದ್ದರು. ಅದನ್ನು ಕೇಳಿದ ಆ ವ್ಯಕ್ತಿ ಕೂಡ ತೀವ್ರವಾಗಿ ಆಘಾತಕ್ಕೊಳಗಾದರು.

ಬೇಗ ಹೋಗಿ ಒಂದು ಕಿಲೋ ಬಿಸಿ ಬಿಸಿ ಜಿಲೇಬಿಯನ್ನು ತಂದು ಪೊಲೀಸ್ ಠಾಣೆಯಲ್ಲಿರುವ ಎಲ್ಲಾ ಪೊಲೀಸರಿಗೆ ತಿನ್ನಿಸಬೇಕು. ಆಗ ಮಾತ್ರ ಅರ್ಜಿಗೆ ಸೀಲ್ ಹಾಕಲಾಗುತ್ತದೆ. ಇಲ್ಲದಿದ್ದರೆ ಈ ಕಂಪ್ಲೆಂಟ್ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಈ ವಿಚಿತ್ರ ಲಂಚದ ಸುದ್ದಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಲುಪಿದ ತಕ್ಷಣ ಎಲ್ಲರೂ ದಿಗ್ಭ್ರಮೆಗೊಂಡರು. ಬಿಸಿ ಜಿಲೇಬಿಗೆ ಆರ್ಡರ್ ಮಾಡಿದ ಕಾನ್ಸ್ಟೆಬಲ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು.

Leave a Reply

Your email address will not be published. Required fields are marked *

error: Content is protected !!