ವಿಟ್ಲ: ಜೆಸಿಐ ತರಬೇತಿ ಸಪ್ತಾಹ ಶ್ರಾವಣ: ಕೇಪು ಕಲ್ಲಂಗಳ ಸರಕಾರಿ ಪ್ರೌಢ ಶಾಲೆಯಲ್ಲಿ 3ನೇ ದಿನದ ಕಾರ್ಯಕ್ರಮ
ಜೆಸಿಐ ವಿಟ್ಲ ವತಿಯಿಂದ ತರಬೇತಿ ಸಪ್ತಾಹ ‘ಶ್ರಾವಣದ “3ನೇ ದಿನದ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಕೇಪು ಕಲ್ಲಂಗಳದಲ್ಲಿ ಜೆಸಿ. ಸಂತೋಷ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯಉಪಾಧ್ಯರು ಆದ ಮಾಲತಿ ಮೇಡಂ ಹಾಗೂ ಸಹ ಶಿಕ್ಷಕರ ಆದ ಲಕ್ಷ್ಮಣ್ ಸರ್ ಅವರು ಪಾಲ್ಗೊಂಡರು.. ಈ ದಿನದ ತರಬೇತಿಯನ್ನು ವಲಯದ ತರಬೇತುದಾರರಾದ ಹಿಂದಿ ಉಪನ್ಯಾಸಕರು ಆದ ಜೆಸಿ. ಸೋಮಶೇಖರ್ ಅವರು ನಡೆಸಿಕೊಟ್ಟರು.. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆಸಿ.ಮುರಳಿ ಪ್ರಸಾದ್ ಹಾಗೂ ಜೆಸಿ. ಆರ್ಥಿಕ್ ಪಟ್ನಾಜೆ ಉಪಸ್ಥಿತರಿದ್ದರು.



