ಬಿಜೆಪಿ ಮುಖಂಡನ ಪುತ್ರ ಕಾಂಗ್ರೆಸ್ ನಲ್ಲಿ ಸ್ಪರ್ಧೆ:
102 ಮತಗಳ ಅಂತರದಲ್ಲಿ ಸೋಲು
ಬೆಂಗಳೂರು: ಕೊಡಗು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರಿಗೆ ಗೆಲುವು ಲಭಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಪ್ರಮುಖ ಬಿಜೆಪಿ ನಾಯರೊಬ್ಬರ ಮಗ ಮಂಥರ್ ಗೌಡ ಅವರು ಸೋಲು ಕಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುಜಾ 705 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್‌ಗೌಡ ಅವರು 603 ಮತಗಳನ್ನು ಪಡೆದರು. 102 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಗೆದ್ದಿದ್ದಾರೆ. ಇನ್ನು ಚಲಾವಣೆಗೊಂಡಿದ್ದ 1,325 ಮತಗಳ ಪೈಕಿ 17 ಮತಗಳು ತಿರಸ್ಕೃತಗೊಂಡಿವೆ.
ಚುನಾವಣೆಯಲ್ಲಿ ಸೋಲುಂಡಿರುವ ಮಂಥರ್ ಗೌಡ ಅವರು ಹಾಸನದ ಪ್ರಮುಖ ಬಿಜೆಪಿ ನಾಯಕ, ಮಾಜಿ ಸಚಿವ ಎ. ಮಂಜು ಅವರ ಪುತ್ರ.
ಎ. ಮಂಜು ಅವರು ಈ ಮೊದಲು ಕಾಂಗ್ರೆಸ್‌ನಲ್ಲೇ ಇದ್ದರಾದರೂ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೇರಿ ಹಾಸನದಿಂದ ಸ್ಪರ್ಧೆ ಮಾಡಿದ್ದರು.





