February 3, 2026

ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣಪತ್ರ ಕೇಳಿದ್ರು: ನಟಿ ನಮಿತಾಗೆ ಆರೋಪ

0
image_editor_output_image171602751-1724741838305.jpg

ಮಧುರೈನ ಮೀನಾಕ್ಷಿ ದೇವಾಲಯದಲ್ಲಿ ತಮಗೆ ಎದುರಾದ ಅವಮಾನದ ಬಗ್ಗೆ ನಟಿ ನಮಿತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತಿ ವೀರೇಂದ್ರ ಚೌಧರಿ ಜೊತೆ ದೇವಸ್ಥಾನಕ್ಕೆ ತೆರಳಿದ್ದ ನಮಿತಾ ಅವರನ್ನು ದೇವಸ್ಥಾನದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣಪತ್ರ ಕೇಳಲಾಗಿದೆ. ‘ನೀವು ಹಿಂದೂ ಎಂಬುದುನ್ನು ಸಾಬೀತು ಮಾಡಿ. ಜಾತಿ ಪ್ರಮಾಣಪತ್ರ ನೀಡಿ’ ಎಂದು ದೇವಸ್ಥಾನದ ಸಿಬ್ಬಂದಿ ಕೇಳಿದ್ದಾರೆ ಅಂತ ನಮಿತಾ ಮತ್ತು ವೀರೇಂದ್ರ ಹೇಳಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ನಮಿತಾ ಮತ್ತು ಅವರ ಪತಿ ವೀರೇಂದ್ರ ಚೌಧರಿ ಅವರು ಮಾಸ್ಕ್ ಧರಿಸಿ ದೇವಸ್ಥಾನಕ್ಕೆ ಹೋಗಿದ್ದರು. ತಾವು ದೇವಸ್ಥಾನಕ್ಕೆ ತೆರಳುವುದರ ಬಗ್ಗೆ ಒಂದು ದಿನ ಮುಂಚೆಯೇ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು. ಜನರು ತಮ್ಮನ್ನು ಗುರುತಿಸಿದರೆ ಜನಜಂಗುಳಿ ಆಗಬಹುದು ಎಂಬ ಕಾರಣದಿಂದ ಅವರು ಮಾಸ್ಕ್ ಧರಿಸಿದ್ದರು. ದಂಪತಿಯನ್ನು 20 ನಿಮಿಷಗಳ ಕಾಲ ಕಾಯಿಸಿ, ಜಾತಿ ಪ್ರಮಾಣಪತ್ರವನ್ನು ಹೇಳಿದ ಬಳಿಕವೇ ದೇವಸ್ಥಾನದ ಒಳಗೆ ಬಿಡಲಾಗಿದೆ. ‘ಈ ರೀತಿ ಬೇರೆ ಎಲ್ಲಿಯೂ ಆಗಿಲ್ಲ’ ಎಂದು ನಮಿತಾ ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!