ವಿಟ್ಲ: ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿತ: ಪವಾಢ ಸದೃಶ ರೀತಿಯಲ್ಲಿ ಮನೆಮಂದಿ ಪಾರು
ವಿಟ್ಲ: ಭಾರೀ ಮಳೆಗೆ ಗುಡ್ಡ ಮನೆ ಮೇಲೆ ಕುಸಿದ ಪರಿಣಾಮ ಮನೆ ಮಂದಿ ಅಪಾಯದಿಂದ ಪಾರಾಗಿದ್ದು, ಮನೆಗೆ ಹಾನಿಯಾದ ಘಟನೆ ವಿಟ್ಲ ಕಸಬಾ ಗ್ರಾಮದ ಕುರುಂಬಳ ಎಂಬಲ್ಲಿ ನಡೆದಿದೆ.
ಕುರುಂಬಳ ನಿವಾಸಿ ಕಲಂದರ್ ಅಲಿ ಅವರ ಮನೆ ಮೇಲೆ ಭಾರೀ ಪ್ರಮಾಣದ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಮಕ್ಕಳು ಸಹಿತ ಏಳು ಮಂದಿ ಇದ್ದು, ಅವರು ಮನೆಯೊಳಗಡೆ ಇದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಗುಡ್ಡ ಸಮೀಪದ ಮನೆಗಳಿದ್ದು, ಅಪಾಯದ ಈ ಬಗ್ಗೆ ಈ ಹಿಂದೆ ಹಲವು ಪಂಚಾಯತ್ ಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತಷ್ಟು ಗುಡ್ಡ ಕುಸಿಯುವ ಭೀತಿಯಿದ್ದು, ಮನೆಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.