December 3, 2024

ಮಂಜೇಶ್ವರ: ಕೊಡ್ಲಮೊಗರು ಸೇವಾ ಸಹಕಾರಿ ಬ್ಯಾಂಕ್ ಗೆ ನುಗ್ಗಿ ದರೋಡೆ

0

ಮಂಜೇಶ್ವರ: ನಿನ್ನೆ ಬೆಳಗ್ಗೆ ಕೊಡ್ಲಮೊಗರು ಸೇವಾ ಸಹಕಾರಿ ಬ್ಯಾಂಕ್ ನ ಶಟರ್ ಮುರಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಹಿಂದಿನ ದಿನ ರಾತ್ರಿ ಒಳ ನುಗ್ಗಿ ಕಳವು ಮಾಡಲು ಯತ್ನಿಸಿದ ಪ್ರಕರಣದ ಮುಂದುವರಿದಿದೆ.

ತನಿಖೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆರಳಚ್ಚು ತಜ್ಞರು, ಪೊಲೀಸ್ ನಾಯಿ ಆಗಮಿಸಿ, ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ನಾಯಿ ಬ್ಯಾಂಕ್ ನಿಂದ ದೈಗೊಳಿ ರಸ್ತೆ ತನಕ ಅಲ್ಪ ದೂರ ತೆರಳಿ ಹಿಂದಿರುಗಿ ಶ್ರೀ ವಾಣಿ ವಿಜಯ ಶಾಲೆ ರಸ್ತೆಯ ಅರ್ಧದ ವರೆಗೆ ತೆರಳಿ ಹಿಂದಿರುಗಿತು.

ಬೆರಳಚ್ಚು ತಜ್ಞರ ಪರಿಶೀಲನೆಯಲ್ಲಿ ಎರಡು ಬೆರಳಚ್ಚು ಸಂಗ್ರಹಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ವರ್ಕಾಡಿ ಮೀಂಜ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ಹಲವು ಕಳವು ಪ್ರಕರಣ ಪದೇ ಪದೇ ನಡೆಯುತ್ತಿದ್ದು, ಕಳವು ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ನಡೆಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ಕಳವು ನಡೆಸಲು 3 ಮಂದಿಯ ತಂಡ ಇರುವುದಾಗಿ ತಿಳಿದು ಬಂದಿದ್ದು, ಬ್ಯಾಂಕಿನ CC ಕ್ಯಾಮರವನ್ನು ಹಾಗೂ ಸೈರನ್ ನ್ನು ತುಂಡರಿಸಿ ತಂಡ ಬ್ಯಾಂಕಿನ ಒಳನುಗ್ಗಿದ್ದು, ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!