ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹಿಳೆ ನಡುವಿನ ಸಂಭಾಷಣೆ ವೈರಲ್
ಪುತ್ತೂರು: “ಬಿಜೆಪಿಯಲ್ಲಿ ಪುತ್ತಿಲ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಇದರರ್ಥ ಭವಿಷ್ಯದಲ್ಲಿ ಎಂಎಲ್‌ಎ ಟಿಕೆಟ್ ಸಿಗುವುದಿಲ್ಲ. ಇನ್ನೂ ಬ್ಯಾನರ್ ಕಟ್ಟಿಕೊಂಡೇ ಕೂರಬೇಕು ಮಹಿಳೆ ಹೇಳಿದ್ದು, ನಾನು ಆಶಾವಾದಿ, ನೋಡುವ ಯಾರ ಕಥೆ ಏನೂ ಅಂತಾ ಎಂದು ಹೇಳಿರುವ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಂಬ ವ್ಯಕ್ತಿ ಎನ್ನಲಾದ ಹಾಗೂ ಮಹಿಳೆಯೋರ್ವರ ನಡುವಿನ ಸಂಭಾಷಣೆ ವೈರಲ್ ಆಗಿದೆ.
ರಾಜಕೀಯ ವಿಚಾರಕ್ಕೆ ಸಂಬಂಧಿಸಿರುವ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೋ ತುಣುಕನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಇದರಲ್ಲಿ ಇರುವ ಕೆಲವು ಅಂಶಗಳು ಚರ್ಚೆಗೆ ಗ್ರಾಸವಾಗಿದೆ.
ಪುತ್ತಿಲ ಅವರ ರಾಜಕೀಯ ನಿಲುವಿನ ಬಗ್ಗೆ ಮಹಿಳೆ ಗಂಭೀರ ಧಾಟಿಯಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಪುತ್ತಿಲ ಎಂದು ಹೇಳಲಾಗಿರುವ ವ್ಯಕ್ತಿ ಜವಾಬು ನೀಡು ತ್ತಿರುವುದು ದಾಖಲಾಗಿದೆ.
ಸಂಭಾಷಣೆಯಲ್ಲಿ ಏನಿದೆ?: “ಬಿಜೆಪಿಯಲ್ಲಿ ಪುತ್ತಿಲ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಇದರರ್ಥ ಭವಿಷ್ಯದಲ್ಲಿ ಎಂಎಲ್‌ಎ ಟಿಕೆಟ್ ಸಿಗುವುದಿಲ್ಲ. ಇನ್ನೂ ಬ್ಯಾನರ್ ಕಟ್ಟಿಕೊಂಡೇ ಕೂರಬೇಕು ಮಹಿಳೆ ಹೇಳಿದ್ದಾರೆ.ನಾನು ಆಶಾವಾದಿ, ನೋಡುವ ಯಾರ ಕಥೆ ಏನೂ ಅಂತಾ ಎಂದು ಪುತ್ತಿಲ ಎನ್ನಲಾದ ವ್ಯಕ್ತಿ ಉತ್ತರಿಸಿದ್ದಾರೆ.
ಪಕ್ಷದ ಜವಾಬ್ದಾರಿ ಸಿಗದೆ ಕಚೇರಿಗೆ ಕಾಲಿಡಲ್ಲ ಎಂದೇಳಿ ನಾಚಿಕೆಗೆಟ್ಟಿದ್ದೀರಿ ಎಂದು ಮಹಿಳೆ ಹೇಳಿದ್ದು, ರಾಜಕೀಯ ಅಂದ್ರೆ ನಾಚಿಕೆ, ಮಾನ ಮರ್ಯಾದೆ ಎರಡೂ ಬಿಡಬೇಕು ಎಂಬ ಉತ್ತರ ಇನ್ನೊಂದು ಕಡೆಯಿಂದ ಬಂದಿದೆ. ಪುತ್ತಿಲ ಪರಿವಾರದ ಪ್ರಸನ್ನ ಮಾರ್ತ ಅವರಿಗೆ 2 ತಿಂಗಳ ಹಿಂದೆಯೇ ಸ್ಥಾನ ಮಾನ ಸಿಕ್ಕಿದೆ ಎಂದು ಮಹಿಳೆ ಹೇಳಿ ದಾಗ, ಅವರಿಗೆ ನಿರೀಕ್ಷೆ ಪಡೆಯದ ಅವಕಾಶ ಸಿಕ್ಕಿದೆ. 2 ತಿಂಗಳ ಹಿಂದೆ ಫಿಕ್ಸ್ ಆಗಿಲ್ಲ. ಅದು ನಿಮಗೆ ಹೇಳಿದವರು ಫಿಕ್ಸ್ ಮಾಡಿರಬಹುದು ಎಂದುತ್ತರಿಸಿದ್ದಾರೆ.




