March 24, 2026

ಸುಳ್ಯ: ಕುಕ್ಕುಂಬಳ ಸೇತುವೆಯಿಂದ ಬಿದ್ದ ಆಟೊ ರಿಕ್ಷಾ

0
image_editor_output_image2098943677-1724655357425.jpg

ಸುಳ್ಯ: ಆಲೆಟ್ಟಿ ಗ್ರಾಮದ ಕುಕ್ಕುಂಬಳ ಸೇತುವೆಯಿಂದ ಆಟೋ ರಿಕ್ಷಾ ಬಿದ್ದ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಚಾಲಕ ವೇಣುಗೋಪಾಲ ದೇವಮೂಲೆ ಗಂಭೀರ ಗಾಯದಿಂದ ಪಾರಾಗಿದ್ದಾರೆ. ದೇವಮೂಲೆಯಲ್ಲಿ ಪ್ರಯಾಣಿಕರೊಬ್ಬರನ್ನು ಇಳಿಸಿ ಪೆರಾಜೆ ಕಡೆಗೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಘಟನೆಯಿಂದಾಗಿ ಆಟೋ ರಿಕ್ಷಾ ಜಖಂಗೊಂಡಿದೆ. ಸೇತುವೆಯ ಕೆಳಗಿನಿಂದ ಆಟೋವನ್ನು ಮೇಲಕ್ಕೆತ್ತಲು ಪ್ರಯತ್ನಿಸಲಾಗುತ್ತಿದ್ದು, ಅದೃಷ್ಟವಶಾತ್ ನೀರಿನ ಮಟ್ಟ ಕಡಿಮೆ ಇದ್ದ ಕಾರಣ ಸಂಭವನೀಯ ಭಾರೀ ದುರಂತ ತಪ್ಪಿದೆ.

Leave a Reply

Your email address will not be published. Required fields are marked *

error: Content is protected !!