August 22, 2026

ಕಾಲೇಜು ವಿದ್ಯಾರ್ಥಿಗಳಿಗೆ ಬನ್ ಬ್ರೆಡ್ ನಲ್ಲಿ ಡ್ರಗ್ಸ್‌ ಮಾರಾಟ: ಇಬ್ಬರ ಬಂಧನ

0
image_editor_output_image775225264-1724393799865.jpg

ಕೊಟ್ಟಾಯಂ: ಬನ್ ಒಳಗೆ ಎಂಡಿಎಂಎ ಡ್ರಗ್ಸ್ ಇಟ್ಟು ಸಾಗಾಟ ಮಾಡುತ್ತಿದ್ದ ಚಂಗನಾಸ್ಸೆರಿ ಮೂಲದ ಅಂಬಾಡಿ ಬಿಜು ಮತ್ತು ಅಖಿಲ್ ಟಿ.ಎಸ್. ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬನ್‌ ನಲ್ಲಿ ಅಡಗಿಸಿ ಇಟ್ಟಿದ್ದ 20 ಗ್ರಾಂ ಡ್ರಗ್ಸ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಬನ್ ರೂಪದಲ್ಲಿ ಡ್ರಗ್ಸ್‌ ಪೂರೈಸುತ್ತಿದ್ದರು ಎಂದು ಹೇಳಲಾಗಿದೆ.

ಜಿಲ್ಲಾ ಪೊಲೀಸ್‌ ಮುಖ್ಯಸ್ಥರ ಮಾದಕ ದ್ರವ್ಯ ನಿಗ್ರಹ ದಳ ಹಾಗೂ ಚಂಗನಾಸ್ಸೆರಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರಿಬ್ಬರು ಅಂತಾರರಾಜ್ಯ ಬಸ್‌ನಲ್ಲಿ ಬೆಂಗಳೂರಿನಿಂದ ಮಾದಕ ದ್ರವ್ಯ ಸಾಗಾಟ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಎಂಡಿಎಂಎ ಕಳ್ಳಸಾಗಣೆ ಗುಂಪಿನ ಬಗ್ಗೆ ಮಾದಕ ದ್ರವ್ಯ ನಿಗ್ರಹ ದಳಕ್ಕೆ ಮೊದಲೇ ಸುಳಿವು ಸಿಕ್ಕಿತ್ತು. ನಂತರದ ಕಾರ್ಯಾಚರಣೆ ವೇಳೆ ಪೆರುನ್ನ ಎನ್‌ಎಸ್‌ಎಸ್‌ ಕಾಲೇಜು ಬಳಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!