“ತಮಿಳಗ ವೇಟ್ರಿ ಕಳಗಂ”ನ ಧ್ವಜದ ಚಿಹ್ನೆಯನ್ನು ಬಿಡುಗಡೆ ಮಾಡಿದ ನಟ ವಿಜಯ್
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ಅವರು ತಮ್ಮ ರಾಜಕೀಯ ಪಕ್ಷವಾದ “ತಮಿಳಗ ವೇಟ್ರಿ ಕಳಗಂ”ನ ಧ್ವಜದ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
ನಟ ವಿಜಯ್ ಅವರು ಪಣಿಯೂರ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಧ್ವಜವನ್ನು ಬಿಡುಗಡೆಗೊಳಿಸಿ, ಬಳಿಕ ತಮ್ಮ ಪಕ್ಷದ ಅಧಿಕೃತ ಹಾಡನ್ನು ಬಿಡುಗಡೆಗೊಳಿಸಿದರು.
ಕುಂಕುಮ ಮತ್ತು ಹಳದಿ ಬಣ್ಣದ ಧ್ವಜದಲ್ಲಿ ಆನೆ ಮತ್ತು ನವಿಲು ಚಿತ್ರ ಧ್ವಜದಲ್ಲಿ ಇದ್ದು ಮಧ್ಯದಲ್ಲಿ ನಕ್ಷತ್ರಗಳು ಇವೆ. 2024ರ ಫೆಬ್ರುವರಿಯಲ್ಲಿ ತಮಿಳಗ ವೇಟ್ರಿ ಕಳಗಂ ಪಕ್ಷವನ್ನು ಸ್ಥಾಪಿಸಿರುವುದಾಗಿ ನಟ ವಿಜಯ್ ಘೋಷಿಸುವ ಮೂಲಕ ತಮಿಳುನಾಡಿನ ರಾಜಕೀಯ ಪ್ರವೇಶಿಸಿದ್ದರು.




