February 2, 2026

78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ SDPI ಉಜಿರೆ ಬ್ಲಾಕ್ ಸಮಿತಿ ವತಿಯಿಂದ ಕ್ರೀಡಾಕೂಟ

0
IMG-20240819-WA0009.jpg

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಜಿರೆ ಬ್ರಾಂಚ್ ಸಮಿತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ತಾಲೂಕಿನ ಚಾರ್ಮಾಡಿ, ಕಾಜೂರು, ಉಜಿರೆ ಕಕ್ಕೆಜಾಲು ನಲ್ಲಿ ಭಾನುವಾರ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.

ಪುರುಷರು, ಮಕ್ಕಳಿಗೆ ಲಿಂಬೆ ಚಮಚ ಓಟ, ಒಂಟಿ ಕಾಲಿನ ಓಟ, ಹಾಳೆ ಓಟ, ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಈ ಮೊದಲಾದ ಗ್ರಾಮೀಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಯಸ್ಸಿನ ಮಿತಿಯನ್ನು ಲೆಕ್ಕಿಸದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಹಿರಿಯರು, ಕಿರಿಯರು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದರು. ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ SDPI ರಾಷ್ಟ್ರೀಯ ಕಾರ್ಯದರ್ಶಿ ಅಲ್ಪೋನ್ಸ್ ಫ್ರಾಂಕೊ, ಕ್ಷೇತ್ರ ಸಮಿತಿ ಸದಸ್ಯರಾದ ನಿಜಾಮ್ ಗೇರುಕಟ್ಟೆ, ಉಜಿರೆ ಬ್ಲಾಕ್ ಉಪಾಧ್ಯಕ್ಷರಾದ ಫಝಲ್ ರಹಮಾನ್, ಮಿತ್ತಬಾಗಿಲು ಪಂಚಾಯತ್ ಸದಸ್ಯರಾದ ಅಹ್ಮದ್ ಕಬೀರ್, ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾದ ರಿಯಾಝ್ ಐ.ಬಿ, ಚಾರ್ಮಾಡಿ ಬ್ರಾಂಚ್ ಅಧ್ಯಕ್ಷರಾದ ರಹೀಮ್ ಬೀಟಿಗೆ, ಸಫ್ವಾನ್ ಉಜಿರೆ, ಕಕ್ಕೆಜಾಲು ಬ್ರಾಂಚ್ ಅಧ್ಯಕ್ಷರಾದ ಮಹಮ್ಮದ್ ಸರ್ವಾನ್, ನಾವೂರು ಬ್ರಾಂಚ್ ಅಧ್ಯಕ್ಷರಾದ ಸಾದಿಕ್ ನಾವೂರು, ಕಾಜೂರು ಬ್ರಾಂಚ್ ಅಧ್ಯಕ್ಷರಾದ ಸಾದಿಕ್ ಪಿ.ಎ, ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ಧಿಕ್ ಯು.ಪಿ, ಲಾಯಿಲ ಪಂಚಾಯತ್ ಸದಸ್ಯರಾದ ಸಲೀಂ ಕುಂಟಿನಿ, ಮರ್ಷದ್ ಉಜಿರೆ, ಅಶ್ರಫ್ ಚಾರ್ಮಾಡಿ, ಕಬೀರ್ ಬೀಟಿಗೆ, ಜುಮ್ಮಾ ಮಸೀದಿ ಜಲಾಲಿಯ ನಗರ ಅಧ್ಯಕ್ಷರಾದ ಸಿದ್ಧಿಕ್, ಇಸುಬು ಬೀಟಿಗೆ, ಸಾದಿಕ್ ಅರೆಕ್ಕಲ್, ಮೋನಾಕ ಫಾಲ್ಕನ್, ನಝೀರ್ ಫಾಲ್ಕನ್, ಮೂಸಾ ಕುಂಞ, ಶಂಶುದ್ದೀನ್ ಡಿ.ಕೆ, ಝುಭೈರ್, ರಿಯಾಜ್, ಮುಸ್ತಫ ಡಿ.ಕೆ, ಪುತ್ತು , ಖಾಲಿದ್ ಬಾವ, ಉಸ್ಮಾನ್ ಚಾರ್ಮಾಡಿ, ಯಾಕೂಬ್ ಮೇಸ್ತ್ರಿ, ಶರೀಫ್ ಡಿ.ಕೆ, ಬ್ರಾಂಚ್ ಸಮಿತಿ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!