ಚಂದಳಿಕೆ ಶಾಲೆಯಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ
ವಿಟ್ಲ: ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸರಕಾರಿ ಹಿರಿಯಪ್ರಾಥಮಿಕ ಶಾಲೆ ಚಂದಳಿಕೆಯಲ್ಲಿ ಸೌತ್ ಕೆನರಾ ಅಸೋಸಿಯೇಷನ್ (ರಿ) ದ. ಕ ಬಂಟ್ವಾಳ ವಲಯದ ವತಿಯಿಂದ ನಡೆಯಿತು.
ಕಾರ್ಯಕ್ರಮವನ್ನು ದೀಪಪ್ರಜ್ವಲನೆಯ ಮೂಲಕ ಬಂಟ್ವಾಳ ವಲಯ ಅಧ್ಯಕ್ಷರಾದ ರೋ ಕಿಶೋರ್ ಬಂಟ್ವಾಳ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ್ ಕಾಯರ್ಮಾರ್ ಕೋಶಧಿಕಾರಿ ಚಂದಳಿಕೆ ವಿದ್ಯಾವರ್ಧಕ ಸಂಘ, ಮುಖ್ಯಅತಿಥಿಗಳಾಗಿ ಅಸೋಸಿಯೇಷನ್ ನ ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ ಮುಡಿಪು, ಶಾಲಾ S D M C ಅದ್ಯಕ್ಷೆಯಾದ ಶ್ರೀಮತಿ ಸುಮತಿ ದೇಜಪ್ಪ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಬಿ.ವಿಶ್ವನಾಥ್ ಗೌಡ ಸ್ವಾಗತಿಸಿದರು. ಸಹ ಶಿಕ್ಷಕ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.




