February 1, 2026

ವಿಪರೀತ ಸಾಲ: ಪುತ್ರಿಯೊಂದಿಗೆ ನದಿಗೆ ಹಾರಿದ ದಂಪತಿ

0
image_editor_output_image-831467724-1723780448725.jpg

ಹಾಸನ: ವಿಪರೀತ ಸಾಲಮಾಡಿ ತೀರಿಸಲಾಗಿದೆ ಒಂದೇ ಕುಟುಂಬದ ಮೂವರು ಹೆಮಾವತಿ ನದಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ನಡೆದಿದೆ.

ಮೃತರನ್ನು ಶ್ರೀನಿವಾಸ್(43), ಶ್ವೇತಾ(36) ಹಾಗೂ ಅವರ ಮಗಳು ನಾಗಶ್ರೀ(13) ಎಂದು ಗುರುತಿಸಲಾಗಿದೆ.

ಮೃತ ಶ್ರೀನಿವಾಸ್ ಕಾರು ಚಾಲಕನಾಗಿದ್ದರು ಮತ್ತು ಅವರ ಪತ್ನಿ ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಈ ಮೂವರು ಕಳೆದ ಮಂಗಳವಾರದಿಂದ ಕಾಣಿಯಾಗಿದ್ದರು. ಕುಟುಂಬಸ್ಥರು ಇವರಿಗಾಗಿ ಎಲ್ಲೆಡೆ ಹುಡುಕಾಡಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. ನಂತರ ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!