ಪೆರ್ನಮುಗೇರು ಬದ್ರಿಯಾ ಜುಮಾ ಮಸೀದಿ ಹಾಗೂ ಬದ್ರಿಯಾ ಮದ್ರಸ ದಲ್ಲಿ ಸ್ವಾತಂತ್ರ್ಯೋತ್ಸವ
ಕರೋಪಾಡಿ ಗ್ರಾಮದ ಪೆರ್ನಮುಗೇರು ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ ದಿನದಂದು ಸರ್ವಧರ್ಮೀಯರು ಒಂದುಗೂಡಿ ಧ್ವಜಾರೋಹಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿ ಕಾರ್ಯದರ್ಶಿಯಾದ ಬಹು ರಜಾಕ್ ಅವರು ಸ್ವಾಗತ ಮಾಡಿದರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತವು ಎಲ್ಲರ ನಾಡಾಗಿದೆ ಈ ನಾಡಿನಲ್ಲಿ ಸರ್ವಧರ್ಮೀಯರು ಒಂದುಗೂಡಿ ಬಾಳಬೇಕು ಎಂಬ ಸಂದೇಶ ನೀಡಿದರು ಅತಿಥಿಗಳಾಗಿ ಬಂದವರು ಒಂದೆರಡು ಮಾತುಗಳನ್ನು ಆಡಿದರು ಕಾರ್ಯಕ್ರಮದಲ್ಲಿ ಬಿ.ಜೆ.ಎಂ ಪರ್ನೆಮುಗರ್ ಅಧ್ಯಕ್ಷರಾದ ಬಹು ಮಹಮ್ಮದ್ ಅವರು ಹಾಗೂ ಕತಿಬರಾದ ಸಿದ್ದೀಕ್ ಮದನಿ ಮತ್ತು ಇಂತಿಯಾಜ್ ರಝ್ವಿ ಹಾಗೂ ನಾಡಿನ ಪ್ರಮುಖರು ಭಾಗವಹಿಸಿದ್ದರು.


