March 14, 2026

ವಿಟ್ಲ: ಜೇಸಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ:ವಿಕಸಿತ ಭಾರತದ ಧ್ಯೇಯ ಪಕ್ವತೆ ಪಡೆಯಲಿ: ನಿವೃತ್ತ ಸೇನಾಧಿಕಾರಿ ದಾಸಪ್ಪ ಪೂಜಾರಿ.ಯನ್

0
image_editor_output_image402608019-1723727868210

ಸ್ವತಂತ್ರ ಭಾರತಕ್ಕೆ ಇಂದು 78ರ ಸಂಭ್ರಮ. ದೇಶದ ಗಡಿಯಲ್ಲಿ ಯೋಧರ ಸೇವೆಯಿಂದ ನಾವಿಂದು ನೆಮ್ಮದಿಯಲ್ಲಿ ಬದುಕುತಿದ್ದೇವೆ. ವಿಕಸಿತ ಭಾರತದ ಧ್ಯೇಯ ಪಕ್ವತೆ ಪಡೆಯಲಿ ಸುದೃಢ ಭಾರತದ ಭದ್ರತೆಗೆ ಮಕ್ಕಳು ಯುವ ತರುಣರು ಸಿದ್ದವಾಗಲಿ ಎಂದು ಭಾರತೀಯ ಸೇನೆಯಲ್ಲಿ 30ವರ್ಷಗಳ ಸೇವೆ ಸಲ್ಲಿಸಿದ್ದ ನಿವೃತ್ತಸೇನಾಧಿಕಾರಿ ದಾಸಪ್ಪ ಪೂಜಾರಿ.ಯನ್ ರವರು  ವಿದ್ಯಾರ್ಥಿಗಳಿಗೆ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಸಲ್ಲಿಸಿದರು.

ವಿಟ್ಟಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ದಲ್ಲಿಯ ಈ ಸಂಭ್ರಮೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ  ಶ್ರೀಧರ ಶೆಟ್ಟಿ ಅವರು ಧ್ವಜಾರೋಹಣ ಗೈದು, ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಾಂಸನೆಗೈದರು. ಶಾಲಾ ವಿದ್ಯಾರ್ಥಿ ನಾಯಕ ಡಿ. ಯನ್. ಜ್ಞಾನೇಶ್ ವಿದ್ಯಾರ್ಥಿ ಪ್ರತಿನಿಧಿಯಾಗಿ ಮಾತನಾಡಿದರು. ಸಮಾರಂಭದಲ್ಲಿ  ಶಾಲಾ ಕಾರ್ಯದರ್ಶಿ ಮೋಹನ ಎ, ನಿರ್ದೇಶಕರಾದ ಹಸನ್ ವಿಟ್ಲ, ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಪ್ರಾಂಶುಪಾಲರಾದ ಜಯರಾಮ್ ರೈ ಉಪ ಪ್ರಾಂಶುಪಾಲೆ  ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಶಾಲಾ ಸಾಂಸ್ಕೃತಿಕ ವಿಭಾಗ “ಅಂಕುರ” ದ ವತಿಯಿಂದ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ವಿದ್ಯಾರ್ಥಿಗಳು ಮತ್ತು ಹೆತ್ತವರು ಭಾಗವಹಿಸಿದ್ದ ಕಾರ್ಯಕ್ರಮವನ್ನು  7ನೇ ತರಗತಿಯ ತಾತ್ವಿಕ ಎನ್ ಕೆ, ಭುವಿ ಪಿ ನಿರೂಪಿಸಿದರು.  ರಮಿತ್ ಮರುವಾಳ ಸ್ವಾಗತಿಸಿದರು. ಧನ್ವಿ ಮತ್ತು ಗ್ರೀಷ
ಬಹುಮಾನ ಪಡೆದ ಮಕ್ಕಳ ಹೆಸರನ್ನು ಓದಿದರು. ಮಾನ್ಯ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಶಿಕ್ಷಕರಾದ ತುಳಸಿ, ಧನಲಕ್ಷ್ಮಿ ಹಾಗೂ ಭಾವನ ಸಹಕರಿಸಿದರು.

Leave a Reply

Your email address will not be published. Required fields are marked *

error: Content is protected !!