March 14, 2026

ಬೆಳ್ತಂಗಡಿ: ವಿದೇಶದಲ್ಲಿರುವ ಸೈಬರ್ ವಂಚಕರಿಗೆ ಸಿಮ್ ಮಾರಾಟ: ಇಬ್ಬರು ಯುವಕರ ಬಂಧನ

0
image_editor_output_image-545888128-1723703421278.jpg

ಮಂಗಳೂರು: ಪರಿಚಿತರನ್ನು ಪುಸಲಾಯಿಸಿ ಅವರ ಹೆಸರಲ್ಲಿ ಮೊಬೈಲ್ ಸಿಮ್ ಗಳನ್ನು ಪಡೆದು ಅದನ್ನು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ಬೆಳ್ತಂಗಡಿಯ ನಿವಾಸಿಗಳಾದ ಬಿಬಿಎ ವಿದ್ಯಾರ್ಥಿ ಶಹಾದ್ ಮೊಹಮ್ಮದ್ ಸಮೀರ್‌ (21), ಮೊಹಮ್ಮದ್ ಅಜೀಮ್‌ (19) ಎಂದು ಗುರುತಿಸಲಾಗಿದೆ. ಬಂಧಿತರಿಂದ 86 ಸಿಮ್ ಕಾರ್ಡ್‌ಗಳು ಸಹಿತ ₹ 5.49 ಲಕ್ಷ ಮೌಲ್ಯದ ಸ್ವತ್ತುಗಳನ್ನು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!