February 2, 2026

ಬಿ.ಕೆ. ಇಮ್ತಿಯಾಜ್ ವಿರುದ್ಧ SDTU ಆಕ್ರೋಶ

0
image_editor_output_image917567357-1723183331003.jpg

ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ಹೋರಾಟದ ವೇಳೆ ಎಸ್ ಡಿಟಿಯು ಸಂಘಟನೆ ವಿರುದ್ದ ಬಿ ಕೆ ಇಮ್ತಿಯಾಜ್ ಸಾರ್ವಜನಿಕವಾಗಿ ತೇಜೋವದೆ ಮಾಡಿರುವುದು ಖಂಡನೀಯ ಎಂದು SDTU ರಾಜ್ಯ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ಮಹಾನಗರ ಪಾಲಿಕೆ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ ನಡೆಸುವುದನ್ನು ಹಾಗೂ ವಿವಿಧ ಬೇಡಿಕೆಗಳನ್ನು ಇರಿಸಿ ನಗರ ಪಾಲಿಕೆ ಕಛೇರಿ ಚಲೋ ಹಾಗೂ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಇದರ ಆಯೋಜಕರು ಕಾರ್ಮಿಕ ಸಂಘಟನೆಯಾದ SDTU ಸಂಘಟನೆಗೆ ಅಧಿಕೃತವಾಗಿ ವಾಟ್ಸನ್ ವಾಯ್ಸ್ ಮುಖಾಂತರ ಮತ್ತು ಜಿಲ್ಲಾ ನಾಯಕರಿಗೆ ಕರೆ ಮಾಡಿ ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿ ಬರುವಂತೆ ಆಹ್ವಾನ ನೀಡಿದ್ದರು.

ಪ್ರತಿಭಟನೆಯ ಆಯೋಜಕರ ಮಾತಿಗೆ ಗೌರವ ನೀಡಿ ನಮ್ಮ ಕಾರ್ಯಕರ್ತರು ನಾಯಕರ ಸೂಚನೆಯಂತೆ ಧ್ವಜದೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದ CPIM ನಾಯಕರಿಬ್ಬರು ಆಹ್ವಾನಿಸಿ ಬಂದ SDTU ಕಾರ್ಯಕರ್ತರನ್ನು ಸಾರ್ವಜನಿಕವಾಗಿ ತೇಜೋವದೆ ಮಾಡಿರುವುದು ಖಂಡನೀಯ ಎಂದರು

Leave a Reply

Your email address will not be published. Required fields are marked *

error: Content is protected !!