ಪಿಎಸ್ಐ ಪುಟ್ಟಸ್ವಾಮಿ ಮನೆಯಲ್ಲಿ ದರೋಡೆ:
ಬೆಂಗಳೂರು: ಅಶೋಕನಗರ ಪೊಲೀಸ್ ಠಾಣೆ ಪಿಎಸ್ಐ ಪುಟ್ಟಸ್ವಾಮಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೋರಮಂಗಲ ಪೊಲೀಸ್ ಠಾಣೆ ಹಿಂಭಾಗ ಪಿಎಸ್ಐ ಪುಟ್ಟಸ್ವಾಮಿ ಮನೆ ಇದೆ. ಮನೆಗೆ ನುಗ್ಗಿದ ದರೋಡೆಕೋರರು ಪಿಎಸ್ಐ ಪುಟ್ಟಸ್ವಾಮಿ ಪತ್ನಿ ಅವರ ಕೈ, ಕಾಲು ಕಟ್ಟಿ, ಮನೆಯಲ್ಲಿದ್ದ 12 ಲಕ್ಷ ರೂ. ಹಣ ಕಳ್ಳತನ ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.





