ಒಕ್ಕೆತ್ತೂರು ನಮ್ಮ ಗೆಳೆಯರು ತಂಡದಿಂದ ವಿಟ್ಲ- ಮಂಗಳೂರು ರಸ್ತೆಯಲ್ಲಿ ಶ್ರಮದಾನ: ಅಪಾಯಕಾರಿ ಗುಂಡಿಗಳಿಗೆ ಮುಕ್ತಿ
ವಿಟ್ಲ: ವಿಟ್ಲ-ಮಂಗಳೂರು ರಸ್ತೆಯಲ್ಲಿ ಬೃಹತ್ ಹೊಂಡಗಳಿಂದಾಗಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ವಾಹನ ಸಾಗುವ ವೇಳೆ ಪಕ್ಕದಲ್ಲಿದ್ದವರ ಮೇಲೆ ಕೆಸರು ನೀರಿನ ಅಭಿಷೇಕವಾಗುತ್ತಿತ್ತು. ರಸ್ತೆಯ ಈ ಹೀನಾಯ ಸ್ಥಿತಿಯ ಬಗ್ಗೆ ಮಾಧ್ಯಮಗಳು ಈಗಾಗಲೇ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು ಆದರೆ ಪರಿಣಾಮ ಶೂನ್ಯ.
ಜನರ ಈ ಗಂಭೀರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಒಕ್ಕೆತ್ತೂರು ನಮ್ಮ ಗೆಳೆಯರು ತಂಡ ಇಂದು ಶ್ರಮದಾನದ ಮೂಲಕ ಈ ಹೊಂಡಗಳನ್ನು ಮುಚ್ಚಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.





