March 19, 2026

ಕಾರಿಗೆ ಜಾಗ ಬಿಡುವ ಸಂದರ್ಭ ಶಾಲಾ ವಾಹನ ಪಲ್ಟಿ

0
image_editor_output_image2055593130-1722675992103.jpg

ಸೋಮವಾರಪೇಟೆ: ಕಾರಿಗೆ ಜಾಗ ಬಿಡುವ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡು ಶಾಲಾ ವಾಹನವೊಂದು ರಸ್ತೆ ಬದಿ ಪಲ್ಟಿಯಾದ ಘಟನೆ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ.

ಇಂದು ಸಂಜೆ ಮಕ್ಕಳನ್ನು ಮನೆಗೆ ಕರೆ ತರುವ ಸಂದರ್ಭ ಜೇನಿಗರ ಕೊಪ್ಪದಲ್ಲಿ ಪಲ್ಟಿಯಾಗಿದೆ. ಸೋಮವಾರಪೇಟೆಯಿಂದ ವಾಹನ ಗೆಜ್ಜೆ ಹಣಕೊಡು, ಚಿಕ್ಕತೋಳೂರು ಮಾರ್ಗದಲ್ಲಿ ಪ್ರತಿ ದಿನ ಚಲಿಸುವ ಶಾಲಾ ವಾಹನ ಇದಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!