ಬಂಟ್ವಾಳ: ನೇತ್ರಾವತಿ ನದಿ ಪಾಲಾದ ಬಸ್ತಿಪಡ್ಪು- ಕಂಚಿಕಾರಪೇಟೆ ರಸ್ತೆ
ಬಂಟ್ವಾಳ: ನಿನ್ನೆ ಸುರಿದ ಮಳೆಯಬ್ಬರಕ್ಕೆ ನೇತ್ರಾವತಿ ನದಿ ಪ್ರವಾಹ ಉಂಟಾಗುವ ಭೀತಿ ಉಂಟಾಗಿತ್ತು. ಆದರೆ ನೇತ್ರಾವತಿ ನೀರಿನ ಹರಿವನ್ನು ತಗ್ಗಿಸುವ ಮೂಲಕ ಪ್ರವಾಹದ ಆತಂಕವನ್ನು ದೂರ ಮಾಡಿದ್ದಾಳೆ. ಆದರೆ ಕೆಲವು ಕಡೆ ಮಳೆ ನೀರಿನಿಂದಾಗಿ ಮುಳುಗಡೆಯಾದ ಪ್ರದೇಶದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ.
ಬಂಟ್ವಾಳ ಬಸ್ತಿಪಡ್ಪುನಿಂದ ಕಂಚಿಕಾರಪೇಟೆಯ ಮೂಲಕ ಗೂಡಿನ ಬಳಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ನೇತ್ರಾವತಿಯ ಪಾಲಾಗಿದೆ.
ನೇತ್ರಾವತಿ ನದಿ ಕಿನಾರೆಯಲ್ಲಿ ಹಾದುಹೋಗುವ ಈ ರಸ್ತೆಯು ಪಾಣೆಮಂಗಳೂರು ಕಡೆಯಿಂದ ಬಂಟ್ವಾಳಕ್ಕೆ ಬರುವ ಹಳೆಯ ಒಳರಸ್ತೆಯಾಗಿದ್ದು ಇಲ್ಲಿ ಕಂಚಿಕಾರಪೇಟೆಯಲ್ಲಿ ಡಾಮರು ರಸ್ತೆಯ ಡಾಮಾರು ನೆರೆಯ ರಭಸಕ್ಕೆ ನೇತ್ರಾವತಿ ನದಿಯ ಒಡಲನ್ನು ಸೇರಿದೆ.




