ಪಾಣೆಮಂಗಳೂರಿನಲ್ಲಿ ಆಗಸ್ಟ್ 1 ರಂದು(ನಾಳೆ) ರಿಫಾಯಿ ಟ್ರೇಡಿಂಗ್ ಕಂಪೆನಿ ಮತ್ತು ಆರ್ಕಿಟೆಕ್ಚರ್ ಸಂಸ್ಥೆ ಶುಭಾರಂಭ
ಬಂಟ್ವಾಳ: ಪಾಣೆಮಂಗಳೂರು ಮಾಂಡೋವಿ ಶೋರೂಮ್ ಬಳಿ ರಿಫಾಯಿ ಟ್ರೇಡಿಂಗ್ ಕಂಪೆನಿ ಮತ್ತು ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ಸ್ ನ AURA ATELIER ಪ್ರೈವೆಟ್ ಲಿಮಿಟೆಡ್ ಇದರ ಕಛೇರಿ ಆಗಸ್ಟ್ 1 ರಂದು ಬೆಳಿಗ್ಗೆ 10ಕ್ಕೆ ಶುಭಾರಂಭಗೊಳ್ಳಲಿದೆ.
ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯು.ಟಿ ಖಾದರ್, ಜೋಗಿಬೆಟ್ಟು ಮಸೀದಿ ಖತೀಬ್ ಯು.ಕೆ ಖಲಂದರ್ ಮದನಿ, ಪುತ್ತೂರು ಪಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಅಶೋಕ್ ಕ್ರಾಸ್ತ, ಚಿತ್ರನಟ ದೇವದಾಸ್ ಕಾಫಿಕಾಡ್, ಪುಷ್ಪನಂದ, ಗಿಲ್ಬರ್ಟ್ ಡಿ ಸೋಜ, ಮನ್ಸೂರ್ ಅಹಮ್ಮದ್, ಪಿಯೂಸ್ ರೊಡ್ರಿಗಸ್, ಪ್ರಕಾಶ್ ಕಾರಂತ, 4 ಗ್ರೂಫ್ ನ ಅಬೂಬಕ್ಕರ್ , ದುಬೈಯ ಬ್ಲೂ ರೋಯಲ್ ಜ ರೊನಾಲ್ಡೊ ಮಾರ್ಟಿಸ್, ಬಂಟ್ವಾಳ ಸಂಯುಕ್ತ ಜಮಾಅತ್ ಅಧ್ಯಕ್ಷ ಹನೀಪ್ ಹಾಜಿ ಗೋಳ್ತಮಜಲು, ಸೂಜಾಹ್ ಮೊಹಮ್ಮದ್, ಪ್ರಶಾಂತ್ ಜೈನ್, ಉಸ್ಮಾನ್ ಶಾಫಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಎಂ ಜಿ ಬ್ರದರ್ಸ್ ಉಪ್ಪಿನಂಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





