ವಯನಾಡ್ ಭೂಕುಸಿತ: ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆ, 197 ಮಂದಿ ಗಾಯ
ವಯನಾಡ್: ವಯನಾಡ್ ದುರ್ಘಟನೆಯಲ್ಲಿ ಈವರೆಗೆ 156 ಮಂದಿ ಮೃತಪಟ್ಟಿದ್ದು, 197 ಮಂದಿ ಗಾಯಗೊಂಡಿದ್ದಾರೆ.
ವಯನಾಡ್ ನಲ್ಲಿ 45 ಪರಿಹಾರ ಶಿಬಿರಗಳನ್ನು ನಿರ್ಮಾಣ ಮಾಡಲಾಗಿದ್ದು, 3,069 ಮಂದಿಗೆ ಆಶ್ರಯ ಒದಗಿಸಲಾಗಿದೆ. ಈ ನಡುವೆ, ಹಲವಾರು ರಕ್ಷಣಾ ಸಂಸ್ಥೆಗಳು ಇಂದು ಬೆಳಗ್ಗೆ ಈ ದುರಂತದಲ್ಲಿ ಮಣ್ಣಿನಡಿ ಸಿಲುಕಿಕೊಂಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಪುನಾರಂಭಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೃತ ಕುಟುಂಬದ ಸದಸ್ಯರಿಗೆ ರೂ. 2 ಲಕ್ಷ ಹಾಗೂ ಗಾಯಗೊಂಡಿರುವವರಿಗೆ ರೂ. 50,000 ಪರಿಹಾರವನ್ನು ಘೋಷಿಸಿದ್ದಾರೆ.




