ಕುಂದಾಪುರ: ಇಂಡಿಯನ್ ಪೈಂಟೆಡ್ ಫ್ರಾಗ್ ಪತ್ತೆ
ಕುಂದಾಪುರ : ವಿಶಿಷ್ಟ ಬಣ್ಣದ ಚಿತ್ತಾರದ ಕಪ್ಪೆಯೊಂದು ಕುಂದಾಪುರದಲ್ಲಿ ಪತ್ತೆಯಾಗಿದೆ. ಕುಂದಾಪುರ ತಾಲೂಕಿನ ಬಸ್ರೂರಿನ ಸಂದೇಶ್ ಪುತ್ರನ್ ಅವರ ಮನೆ ಅಂಗಳದಲ್ಲಿ ಕಾಣಿಸಿಕೊಂಡಿದೆ.
ಬಹಳ ಅಪರೂಪವಾಗಿರುವ ಈ ಕಪ್ಪೆ ಆಕರ್ಷಣೀಯವಾಗಿದೆ. ಇದರ ಸಾಮಾನ್ಯ ಹೆಸರು ಇಂಡಿಯನ್ ಪೈಂಟೆಡ್ ಫ್ರಾಗ್. ವೈಜ್ಞಾನಿಕ ಹೆಸರು ಉಪರೋಡಾನ್ ಟ್ಯಾಪ್ರೊಬಾನಿಕಸ್ ಆಗಿದೆ. ಮರದೊಳಗಿರುವ ಈ ಕಪ್ಪೆ ನಿಂತ ನೀರಲ್ಲಿ ಕೆರೆಗಳಲ್ಲಿ ಮೊಟ್ಟೆ ಇಟ್ಟು ಸಂತಾನವನ್ನು ಅಭಿವೃದ್ಧಿ ಪಡಿಸುತ್ತದೆ.





